ದೇಶ

ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ವಿರುದ್ಧ ಟೀಕೆ: ಗಾಂಧಿ ವಿವಿ ಪ್ರೊಫೆಸರ್ ಮೇಲೆ ಹಲ್ಲೆ

Shilpa D
ಬಿಹಾರ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಿದ್ದ ಬಿಹಾರ ಗಾಂಧಿ ವಿವಿ ಪ್ರೊಫೆಸರ್ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಪ್ರೊಫೆಸರ್ ವಾಸವಿದ್ದ ಮೂರನೇ ಮಹಡಿಯಿಂದ ಆತನನ್ನು ಎಳೆದು ತಂದು ಹಲ್ಲೆ ಮಾಡಲಾಗಿದೆ, ಜೊತೆಗೆ ಆತನನ್ನು ಸಜೀವ ದಹಲ ಮಾಡಲು ಹಲ್ಲೆಕೋರರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಕೂಡಲೇ ಪ್ರೊಫೆಸರ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಪಾಟ್ನಾದ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. 
ನಾನು ವಾಜಪೇಯಿ ಅವರ ಬಗ್ಗೆ ಮಾತನಾಡಿರರಲಿಲ್ಲ,  ವಿವಿ ಉಪಕುಲಪತಿಗಳ ಬಗ್ಗೆ ಕಮೆಂಟ್ ಹಾಕಿದ್ದಕ್ಕೆ ನನ್ನು ಮೇಲೆ ಹಲ್ಲೆ ಮಾಡಿದ್ದಾರೆ, ಅವರೆಲ್ಲಾ ಉಪ ಕುಲಪತಿಗಳ ಕಡೆಯವರು ಎಂದು ಗಾಯಗೊಂಡಿರುವ ಪ್ರೊಪೆಸರ್ ಆರೋಪಿಸಿದ್ದಾರೆ.
SCROLL FOR NEXT