ದೇಶ

ಪ್ರವಾಹದ ಸಂತ್ರಸ್ತರ ಬಗ್ಗೆ ಅವಹೇಳನ: ಕೇರಳ ಮೂಲದ ಉದ್ಯೋಗಿಗೆ ಗೇಟ್ ಪಾಸ್ ನೀಡಿದ ಗಲ್ಫ್ ಸಂಸ್ಥೆ!

Srinivas Rao BV
ದುಬೈ: ಕೇರಳದ ಸಂತ್ರಸ್ತರಿಗೆ ಸಹಾಯ ಹಸ್ತಚಾಚಲು ಹೊರದೇಶಗಳಿಂದಲೂ ಸ್ಪಂದನೆ ದೊರೆಯುತ್ತಿದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳು ಹೆಚ್ಚು ನೆರವು ನೀಡಲು ಮುಂದಾಗುತ್ತಿವೆ. ಆದರೆ ಗಲ್ಫ್ ನಲ್ಲಿರುವ ಕೇರಳ ಮೂಲದ ವ್ಯಕ್ತಿ ಸಂತ್ರಸ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. 
ಸಂತ್ರಸ್ತರ ಸ್ಥಿತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಲುಲು ಗ್ರೂಪ್ ನಲ್ಲಿ ಕ್ಯಾಶರ್ ಆಗಿ ಕೆಲಸ ಮಾಡುತ್ತಿರುವ ರಾಹುಲ್ ಚೆರು ಪಲಯಟ್ಟು ಎಂಬ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು,  ತಪ್ಪನ್ನು ಅರಿತ ವ್ಯಕ್ತಿ ಕ್ಷಮೆ ಯಾಚಿಸಿದ್ದಾರೆ. ಕೇರಳದ ಸಂಸ್ತ್ರಸ್ತರಿಗೆ ಎದುರಾಗಿರುವ ನೈರ್ಮಲ್ಯ ಅವಶ್ಯಕತೆಗಳ ಬಗ್ಗೆ ಫೇಸ್ ಬುಕ್ ನಲ್ಲಿ ರಾಹುಲ್ ಚೆರು ಪಲಯಟ್ಟು ಎಂಬ ವ್ಯಕ್ತಿ ಅವಹೇಳನಕಾರಿಯಾಗಿ ಬರೆದಿದ್ದರು. 
ಈ ಪೋಸ್ಟ್ ನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆಯ ವ್ಯವಸ್ಥಾಪಕರು, ತಕ್ಷಣವೇ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ತಪ್ಪಿನ ಅರಿವಾಗುತ್ತಿದ್ದಂತೆಯೇ ರಾಹುಲ್ ಚೆರು ಪಲಯಟ್ಟು ಕ್ಷಮೆ ಯಾಚಿಸಿದ್ದು,  ನಾನು ಆ ಪೋಸ್ಟ್ ನ್ನು ಹಾಕಬೇಕಾದರೆ ಅಮಲಿನ ಸ್ಥಿತಿಯಲ್ಲಿದ್ದೆ ಎಂದೂ ಸ್ಪಷ್ಟನೆ ನೀಡಿದ್ದಾರೆ. 
ಭಾರತದ ಬಿಲೇನಿಯರ್ ಗಳ ಪೈಕಿ ಒಬ್ಬರಾಗಿರುವ ಎಂಎ ಯುಸೂಫ್ ಅಲಿ ಲುಲು ಗ್ರೂಪ್ ನ ಮಾಲಿಕರೂ ಆಗಿದ್ದು, ಕೇರಳದ ಮೂಲದ ಇವರು 9.23 ಮಿಲಿಯನ್ ಯುಎಇ ದಿರಾಮ್  ನಷ್ಟು ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. 
SCROLL FOR NEXT