ಮಂಡ್ಸೌರ್: ಮಧ್ಯ ಪ್ರದೇಶದ ಮಂಡ್ಸೌರ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಕಾಮುಕರಿಗೆ ವಿಶೇಷ ಕೋರ್ಟ್ ಮಂಗಳವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಳೆದ ಜೂನ್ 26ರಂದು ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಕೋರ್ಟ್ ನ್ಯಾಯಾಧೀಶೆ ನಿಶಾ ಗುಪ್ತಾ ಅವರು, ಅಪರಾಧಿಗಳಾದ ಇರ್ಫಾನ್ ಅಲಿಯಾಸ್ ಭೈಯು(20) ಹಾಗೂ ಆಸಿಫ್(24)ಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಬಿಎಸ್ ಥಾಕೂರ್ ಅವರು ತಿಳಿಸಿದ್ದಾರೆ.
ಜೂನ್ 26ರಂದು ಶಾಲೆಯ ಮುಂದೆ ತನ್ನ ತಂದೆಗಾಗಿ ಕಾಯುತ್ತಿದ್ದ 8 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯ ಕತ್ತು ಸೀಳಿ ಹತ್ಯೆಗೆ ಯತ್ನಿಸಲಾಗಿತ್ತು.
ಘಟನೆ ನಡೆದ 18 ಗಂಟೆಗಳ ಬಳಿಕ ಬಾಲಕಿ ಪತ್ತೆಯಾಗಿದ್ದು, ಇಂಧೋರ್ ನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.