ದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡು ಹಾರಿಸಿ ಬಿಜೆಪಿ ಸದಸ್ಯನ ಹತ್ಯೆ

Manjula VN
ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಗುಂಡು ಹಾರಿಸಿ ಬಿಜೆಪಿ ಸದಸ್ಯನೊಬ್ಬನನ್ನು ಹತ್ಯೆ ಮಾಡಿದ್ದಾರೆ. 
ಪುಲ್ವಾಮಾ ಜಿಲ್ದೆಯ ರಾಖ್ ಲಿಟ್ಟರ್ ಗ್ರಾಮದ ನಿವಾಸಿ ಶಬ್ಬೀರ್ ಅಹಮದ್ ಹತ್ಯೆಯಾದ ಬಿಜೆಪಿ ಸದಸ್ಯ ಎಂದು ಹೇಳಲಾಗುತ್ತಿದೆ. 
ಇಂದು ಬೆಳಿಗಿನ ಜಾವ 2.30ರ ಸುಮಾರಿಗೆ ಶಬ್ಬೀರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
SCROLL FOR NEXT