ದೇಶ

ಯಾವುದೇ ಮುನ್ಸೂಚನೆ ನೀಡದೆಯೆ ಡ್ಯಾಮ್ ಗಳ ಗೇಟ್ ತೆರೆಯಲಾಗಿದೆ: ಕೇರಳ ಪ್ರತಿಪಕ್ಷ ನಾಯಕ ಆರೋಪ

Lingaraj Badiger
ತಿರುವನಂತಪುರಂ: ಕೇರಳ ಸರ್ಕಾರ ರಾಜ್ಯದ ಜನತೆಗೆ ಸೂಕ್ತ ಮುನ್ನೆಚ್ಚರಿಕೆ ನೀಡದೆಯೇ ಎಲ್ಲಾ ಡ್ಯಾಮ್ ಗಳ ಗೇಟ್ ಗಳನ್ನು ಓಪನ್ ಮಾಡಿದ್ದೆ ಪ್ರವಾಹಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ ಅವರು ಬುಧವಾರ ಆರೋಪಿಸಿದ್ದಾರೆ.
231 ಜನರನ್ನು ಬಲಿ ಪಡೆದ ಕೇರಳ ಪ್ರವಾಹಕ್ಕೆ ಮಾನವ ನಿರ್ಮಿತ ವಿಪತ್ತು ಎಂದಿರುವ ರಮೇಶ್ ಅವರು, ಯಾವುದೇ ಎಚ್ಚರಿಕೆ ನೀಡದೆ ಎಲ್ಲಾ ಡ್ಯಾಮ್ ಗಳ ಗೇಟ್ ಗಳನ್ನು ಓಪನ್ ಮಾಡಿದ್ದೆ ಪ್ರವಾಹಕ್ಕೆ ಕಾರಣ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಡ್ಯಾಮ್ ಗಳ ಗೇಟ್ ಓಪನ್ ಮಾಡುವ ವಿಚಾರದಲ್ಲಿ ಇಂಧನ ಸಚಿವ ಎಂಎಂ ಮಣಿ ಹಾಗೂ ಜಲ ಸಂಪನ್ಮೂಲ ಸಚಿವ ಟಿಎಂ ಥಾಮಸ್ ಐಸಾಕ್ ಅವರ ನಡುವೆ ಹೊಂದಾಣೆಕೆ ಇರಲಿಲ್ಲ ಎಂದಿದ್ದಾರೆ.
ಜುಲೈ ಮಧ್ಯದಲ್ಲಿಯೇ ರಾಜ್ಯದ ಎಲ್ಲಾ ಡ್ಯಾಮ್ ಗಳು ಶೇ.90ರಷ್ಟು ಭರ್ತಿಯಾಗಿದ್ದವು. ಆದರೂ ಸರ್ಕಾರ ಜನತೆಗೆ ಮುನ್ನೆಚ್ಚರಿಕೆ ನೀಡದೆ ನಿರ್ಲಕ್ಷ ವಹಿಸಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಆರೋಪಿಸಿದ್ದಾರೆ.
SCROLL FOR NEXT