ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ಪೂರ್ವಜರ ಬಲಿದಾನ ಸ್ಮರಿಸುವ ದಿನವಾದ ಬಕ್ರೀದ್ ಹಬ್ಬವನ್ನು ಬುಧವಾರ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್ ಅವರು, ಸಹೋದರತ್ವ ಹಂಚಿಕೊಂಡ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಎಲ್ಲಾ ನಾಗರೀಕರಿಗೂ ಈದ್ ಮುಬಾರತ್. ಪ್ರಮುಖವಾಗಿ ಭಾರತದಲ್ಲಿರುವ ಹಾಗೂ ವಿದೇಶದಲ್ಲಿರುವ ಮುಸ್ಲಿಂ ಸಹೋದರ ಹಾಗೂ ಸಹೋದರಿಯರಿಗೆ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.
ಈಗ್-ಉಲ್-ಜುಹಾವನ್ನು ತ್ಯಾಗದ ಪ್ರತೀಕ ಹಾಗೂ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ. ಸಹೋದರತ್ವ ಹಂಚಿಕೊಂಡ ಸಮಾಜದಲ್ಲಿ ಏಕತೆಯಿಂದ, ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ.
ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯರೂ ಕೂಡ ಟ್ವೀಟ್ ಮಾಡಿದ್ದು, ಈದ್-ಉಲ್-ಜುಹಾ ಶುಭಾಶಯಗಳು. ಈ ದಿನ ಸಹಾನುಭೂತಿ ಹಾಗೂ ಸೋದರತ್ವ ಎಂಬ ಚೈತನ್ಯವನ್ನು ಗಾಢವಾಗಿಸೋಣ ಎಂದು ಹೇಳಿದ್ದಾರೆ.