ದೇಶ

ಕೇಂದ್ರ ಹಣಕಾಸು ಸಚಿವರಾಗಿ ಅರುಣ್ ಜೇಟ್ಲಿ ಮರು ನೇಮಕ; ಇಂದು ಕರ್ತವ್ಯಕ್ಕೆ ಹಾಜರು

Sumana Upadhyaya

ನವದೆಹಲಿ: ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ ಗುರುವಾರ ಮತ್ತೆ ಹಣಕಾಸು ಖಾತೆ ವಹಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಹಣಕಾಸು ಸಚಿವ ಸ್ಥಾನಕ್ಕೆ ಮರು ನೇಮಕ ಮಾಡಿದ್ದಾರೆ.

ಪ್ರಧಾನಿಯವರ ಸಲಹೆ ಮೇರೆಗೆ ರಾಷ್ಟ್ರಪತಿಗಳು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಖಾತೆ ಇಲಾಖೆಯನ್ನು ಅರುಣ್ ಜೇಟ್ಲಿಯವರಿಗೆ ವಹಿಸುವಂತೆ ಆದೇಶಿಸಿದ್ದಾರೆ ಅಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸಂಸತ್ತಿನ ಉತ್ತರ ಬ್ಲಾಕ್ ನಲ್ಲಿರುವ ಕಚೇರಿಯಲ್ಲಿ ಅರುಣ್ ಜೇಟ್ಲಿಯವರು ಇಂದು ಮತ್ತೆ ತಮ್ಮ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಕಳೆದ ಮೇ 14ರಂದು ಅರುಣ್ ಜೇಟ್ಲಿಯವರು ಮೂತ್ರಪಿಂಡದ ಕಸಿ ಮಾಡಿಕೊಂಡಿದ್ದರು. ಅಂದು ಅವರ ಖಾತೆಯನ್ನು ಮಧ್ಯಂತರ ಅವಧಿಗೆ ಪಿಯೂಷ್ ಗೋಯಲ್ ಅವರಿಗೆ ವಹಿಸಲಾಗಿತ್ತು. ಜೇಟ್ಲಿಯವರ ಸರ್ಜರಿಯಾದ ನಂತರ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದರು.

ಕಳೆದ ಆಗಸ್ಟ್ 9ರಂದು ರಾಜ್ಯಸಭೆ ಉಪ ಸಭಾಪತಿ ಚುನಾವಣೆಗೆ ಆಗಮಿಸಿದ್ದು ಬಿಟ್ಟರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
2000ನೇ ಇಸವಿಯಿಂದ ರಾಜ್ಯಸಭೆ ನಾಯಕರಾಗಿದ್ದಾರೆ.

SCROLL FOR NEXT