ಪ್ರಧಾನಿ ನರೇಂದ್ರಮೋದಿ 
ದೇಶ

2022ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ

2022ಕ್ಕೆ ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದು, ಅಷ್ಟರೊಳಗೆ ದೇಶದ ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜುಲ್ವಾ: 2022ಕ್ಕೆ ದೇಶ  75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದು, ಅಷ್ಟರೊಳಗೆ  ದೇಶದ  ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ವಾಲ್ಸಾಡದ ಜುಜ್ವಾದಲ್ಲಿಂದು  ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ  ವಿಡಿಯೋ  ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು ,ಈ ಯೋಜನೆಯಡಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಕಟ್ಟಬಹುದಾಗಿದೆ. ಯಾರೂಬ್ಬರು ನಯಾಪೈಸೆ ಲಂಚವನ್ನು ನೀಡಬಾರದು ಎಂದರು.

 ಕಾನೂನು ಬದ್ದವಾಗಿ ಮನೆ ಪಡೆಯುತ್ತಿರುವ ಬಗ್ಗೆ ತಾಯಂದಿರು ಹಾಗೂ ಸಹೋದರಿಯರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ನಯಾಪೈಸೆ ಲಂಚವನ್ನು ನೀಡಿಲ್ಲ ಎಂದು ಮೋದಿ ಹೇಳಿದರು

ಪ್ರಧಾನಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳ ಗುಣಮಟ್ಟವನ್ನು ನೋಡಿ ಸರ್ಕಾರವು ಹಣವನ್ನು ನೀಡಿದೆ ಎಂದು ಭಾವಿಸಿದ್ದೆ, ಆದರೆ ಅದರೊಂದಿಗೆ ಈ ಕುಟುಂಬಗಳ ಬೆವರು ಸೇರಿದೆ ಎಂದರು.
 ಮನೆ ಹೇಗೆ ಕಟ್ಟಬಹುದು, ಏನೆಲ್ಲಾ ಸಾಮಾಗ್ರಿಗಳು ಬೇಕಾಗುತ್ತದೆ. ಇದೆಲ್ಲಾವನ್ನು ಕುಟುಂಬಗಳೇ ನಿರ್ಧರಿಸುತ್ತಿದ್ದಾರೆ.  ಗುತ್ತಿಗೆದಾರರಲ್ಲಿ ನಮ್ಮಗೆ ನಂಬಿಕೆ ಇಲ್ಲ. ಆದರೆ, ಕುಟುಂಬಗಳು ಸ್ವಂತವಾಗಿ ಮನೆ ನಿರ್ಮಾಣ ಕೆಲಸ ಮಾಡಿದ್ದಾಗ   ಅದು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ