ತಾಯಿ, ಸಹೋದರಿಯನ್ನು ಇರಿದು ಕೊಂದ ವ್ಯಕ್ತಿ, ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್!
ವ್ಯಕ್ತಿಯೊಬ್ಬ ತನ್ನ ತಾಯಿ, ಸಹೋದರಿಯನ್ನು ಇರಿದು ಹತ್ಯೆ ಮಾಡಿದ್ದು ಮತ್ತೋರ್ವ ವ್ಯಕ್ತಿಗೆ ಇರುದು ಘಾಸಿಗೊಳಿಸಿರುವ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.
ಹತ್ಯೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿರುವ ವ್ಯಕ್ತಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ. ಇದಕ್ಕೂ ಮುನ್ನ 2016 ರಿಂದ ಆತನ ಮೇಲೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಲಾಗಿತ್ತು. ಈಗ ಈ ಘಟನೆ ನಡೆದಿರುವುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ, ಇಸ್ಲಾಮಿಕ್ ಉಗ್ರ ಸಂಘಟನೆ ಇದಕ್ಕೆ ಹೊಣೆ ಹೊತ್ತಿದ್ದು, ತಮ್ಮದೇ ಸಂಘಟನೆಯ ವ್ಯಕ್ತಿ ಈ ರೀತಿ ಭಯೋತ್ಪಾದಕ ಕೃತ್ಯವೆಸಗಿದ್ದಾನೆ ಎಂದು ಹೇಳಿದೆ.
ಫ್ರೆಂಚ್ ನ ಕ್ರಿಮಿನಲ್ ಪ್ರಾಸಿಕ್ಯೂಟರ್ ಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.