ಲಂಡನ್: ಒಂದು ವೇಳೆ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ವಿದೇಯಕ ಜಾರಿಗೆ ತಂದರೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್ ನ ಸ್ಕೂಲ್ ಆಪ್ ಎಕಾನಾಮಿಕ್ಸ್ ನಲ್ಲಿ ಮಾತನಾಡಿದ ರಾಹುಲ್, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಯಾವ ದಿನ ನೀವು ಮಹಿಳಾ ಮೀಸಲಾತಿ ಮಸೂದೆ ಮಂಡಿಸುತ್ತೀರೋ ಅಂದು ಇಡಿ ಕಾಂಗ್ರೆಸ್ ನಿಮಗೆ ಬೆಂಬಲ ನೀಡುತ್ತದೆ ಎಂದು ಸಂದೇಶ್ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಮಾರ್ಚ್ 9 ರಂದು ಮಹಿಳಾ ಮೀಸಲಾತಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆಯಾಗಿತ್ತು, ಆದರೆ ಲೋಕಸಭೆಯಲ್ಲಿ ಇನ್ನೂ ಅದಕ್ಕೆ ಅಂಗಿಕಾರವಾಗಿಲ್ಲ.