ಅಲ್ ಜಜೀರಾದ ಭದ್ರತಾ ಕ್ಲಿಯರೆನ್ಸ್ ರದ್ದು, ಭಾರತದಲ್ಲಿ ವಾಹಿನಿ ಪ್ರಸಾರ ರದ್ದು!
ಕತಾರ್ ಮೂಲದ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ವಾಹಿನಿಗೆ ಭಾರತದಲ್ಲಿ ನೀಡಲಾಗಿದ್ದ ಭದ್ರತಾ ಕ್ಲಿಯರೆನ್ಸ್ ನ್ನು ವಾಪಸ್ ಪಡೆಯಲಾಗಿದೆ.
ನವದೆಹಲಿ: ಕತಾರ್ ಮೂಲದ ಅಂತಾರಾಷ್ಟ್ರೀಯ ಆಂಗ್ಲ ಸುದ್ದಿ ವಾಹಿನಿಗೆ ಭಾರತದಲ್ಲಿ ನೀಡಲಾಗಿದ್ದ ಭದ್ರತಾ ಕ್ಲಿಯರೆನ್ಸ್ ನ್ನು ವಾಪಸ್ ಪಡೆಯಲಾಗಿದೆ.
ಭದ್ರತಾ ಅನುಮೋದನೆಯನ್ನು ರದ್ದುಗೊಳಿಸಿರುವುದರ ವಿರುದ್ಧ ಅಲ್ ಜಜೀರಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಕುರಿತ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗುತ್ತಿದೆ.
ಸುದ್ದಿ ವಾಹಿನಿಗೆ ನೀಡಲಾಗಿದ್ದ ಭದ್ರತಾ ಅನುಮೋದನೆ ಹಿಂಪಡೆಯುವುದಕ್ಕೆ ನಿರ್ದಿಷ್ಟ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಜಮ್ಮು-ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಸುದ್ದಿ ವಾಹಿನಿ ಪ್ರಕಟಿಸಿದ್ದ ಸಾಕ್ಷ್ಯ ಚಿತ್ರದ ಕಾರಣದಿಂದಾಗಿ ಕೇಂದ್ರ ಸರ್ಕಾರ ಅಸಮಾಧಾನಗೊಂಡಿದ್ದು, ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.