ದೇಶ

ಬ್ಯಾಲೆಟ್ ಪೇಪರ್ ನಲ್ಲೇ ಚುನಾವಣೆ ನಡೆಸಬೇಕು: ಶರದ್ ಯಾದವ್

Srinivas Rao BV
ನವದೆಹಲಿ: ಇವಿಎಂ ಗಳ ಬಗ್ಗೆ ಉಂಟಾಗಿರುವ ಅನುಮಾನಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಲೋಕತಾಂತ್ರಿಕ ಜನತಾದಳ(ಎಲ್ ಜೆಡಿ) ನಾಯಕ ಶರದ್ ಯಾದವ್ ಆಗ್ರಹಿಸಿದ್ದಾರೆ. 
ಮತಯಂತ್ರಗಳ ಕುರಿತು ಹಲವು ಅನುಮಾನಗಳೆದ್ದಿವೆ, ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಚುನಾವಣಾ ಆಯೋಗ ವಿವಿಪ್ಯಾಟ್ ಬಗ್ಗೆ ನೀಡಿದ್ದ ಭರವಸೆಗಳನ್ನೂ ಈಡೇರಿಸಿಲ್ಲ, ಆದ್ದರಿಂದ ಈ ಬಾರಿಯ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲೇ ನಡೆಸಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. 
ಮತಯಂತ್ರಗಳ ದೋಷಗಳಿಂದಾಗಿ ಜನತೆ  ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ, ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಆದ್ದರಿಂದ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ನಲ್ಲೆ ನಡೆಸಬೇಕೆಂದು ಶರದ್ ಯಾದವ್ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷದ ನಾಯಕರೊಂದಿಗೆ ಕೇಂದ್ರ ಚುನಾವಣಾ ಆಯೋಗ ಸಭೆ ನಡೆಸುವ ಸಂದರ್ಭದಲ್ಲೆ ಶರದ್ ಯಾದವ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. 
SCROLL FOR NEXT