ದೇಶ

ಕಾರ್ಗಿಲ್ ಯುದ್ಧದಲ್ಲೇ ಅಲ್ಲ, ಸೌಹಾರ್ದತ ವಾಲಿಬಾಲ್ ಪಂದ್ಯದಲ್ಲೂ ಪಾಕ್ ಸೈನಿಕರನ್ನು ಮಣಿಸಿದ ಭಾರತೀಯ ಸೇನೆ!

Vishwanath S
ನವದೆಹಲಿ: ಶಾಂಘೈ ಸಹಕಾರ ಸಂಘದ ವತಿಯಿಂದ ನಡೆದ ಸಮರಾಭ್ಯಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಯೋಧರು ಭಾಗಿಯಾಗಿದ್ದರು. 
ಸಮಾರಭ್ಯಾಸದ ವೇಳೆ ತಂಡಗಳ ನಡುವೆ ಸೌಹಾರ್ದತ ವಾಲಿಬಾಲ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಸೈನಿಕರಿಗೆ ಭಾರತೀಯ ಸೇನೆ ಮಣ್ಣು ಮುಕ್ಕಿಸಿದೆ. 
ಎಸ್'ಸಿಒದ ಶಾಂತಿ ಮಿಷನ್-2018 ಅಡಿಯಲ್ಲಿ ರಷ್ಯಾ ರಾಷ್ಟ್ರ ಚೆಬಾರ್ಕುಲ್ ಹಾಗೂ ಚೆಲ್ಯಾಬಿಸ್ಕ್ ಪ್ರದೇಶಗಳಲ್ಲಿ ಈ ಸಮರಾಭ್ಯಾಸ ನಡೆಯಲಿದ್ದು, ಕೇವಲ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳಷ್ಟೇ ಅಲ್ಲದೆ, ಎಸ್'ಸಿಒ ಸದಸ್ಯ ರಾಷ್ಟ್ರಗಳೂ ಕೂಡ ಇದರಲ್ಲಿ ಭಾಗವಹಿಸಿದ್ದವು.
ಎಸ್'ಸಿಒ ಸದಸ್ಯ ರಾಷ್ಟ್ರಗಳ ಈ ಜಂಟಿ ಸಮಾರಾಭ್ಯಾಸ ರಷ್ಯಾದ ಚೆಬಾರ್ಕುಲ್ ಪ್ರದೇಶದಲ್ಲಿ ಆಗಸ್ಟ್ 22ರಿಂದ ಆಗಸ್ಟ್ 29ರವರೆಗೂ ಅಂದರೆ 8 ದಿನಗಳ ಕಾಲ ನಡೆಯಿತು. ಅಂತಿಮವಾಗಿ ಸೇನೆಗಳ ನಡುವೆ ಸೌಹಾರ್ದತ ವಾಲಿಬಾಲ್ ಪಂದ್ಯವನ್ನು ಆಯೋಜಿಸಲಾಗಿತ್ತು. 
ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ಇದರೆ ರಾಷ್ಟ್ರಗಳು ಯೋಧರೊಂದಿಗೆ ಜಂಟಿಯಾಗಿ ಸಮರಾಭ್ಯಾಸ ನಡೆಸುವ ವಿಶೇಷ ಅವಕಾಶವನ್ನು ಎಸ್'ಸಿಒ ಒದಗಿಸಿದೆ. ಇದು ವೃತ್ತಿಪರ ಹೊಂದಾಣಿಕೆಯಾಗಲಿದ್ದು, ಜಂಟಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಕವಾಯತು ಮತ್ತು ನಿಯಮಾವಳಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಇದರ ಜೊತೆಗೆ ಉಗ್ರ ಬೆದರಿಕೆಗಳನ್ನು ನಿಗ್ರಹಿಸಲು ನೆರವಾಗಿದೆ.
ಈ ಜಂಟಿ ಸಮಾರಾಭ್ಯಾಸಕ್ಕೆ ರಷ್ಯಾ ರಾಷ್ಟ್ರ 1700 ಸೈನಿಕರನ್ನು ನಿಯೋಜಿಸಿದ್ದರೆ, ಚೀನಾ 700 ಹಾಗೂ ಭಾರತ 200 ಸೈನಿಕರನ್ನು ಕಳುಹಿಸಿತ್ತು.
SCROLL FOR NEXT