ದೇಶ

ಮಾಲೆಗಾಂವ್ ಸ್ಫೋಟ: ಕಿರುಕುಳದ ಬಗ್ಗೆ ಎಸ್ಐಟಿ ತನಿಖೆ ಕೋರಿದ ಪುರೋಹಿತ್

Lingaraj Badiger
ನವದೆಹಲಿ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್‌ ಅವರು ಉಗ್ರ ನಿಗ್ರಹ ದಳ(ಎಟಿಎಸ್)ದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತಮಗೆ ಕಿರುಕುಳ ನೀಡಿದ ಬಗ್ಗೆ ಎಸ್ ಐಟಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಮಾಲೆಗಾಂವ್ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಪುರೋಹಿತ್ ಅವರನ್ನು 2008ರಲ್ಲಿ ಬಂಧಿಸಲಾಗಿತ್ತು. ಸತತ ಒಂಬತ್ತು ವರ್ಷಗಳ ಜೈಲುವಾಸದ ನಂತರ ಕಳೆದ ವರ್ಷ ಆಗಸ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದರು. 
ಮಾಧ್ಯಮಗಳ ವರದಿಯ ಪ್ರಕಾರ, ಎಟಿಎಸ್ ವಶದಲ್ಲಿದ್ದಾಗ ಪುರೋಹಿತ್ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ.
ನಾಸಿಕ್​ನ ಮಾಲೆಗಾಂವ್​ನ ಭೀಕು ಚೌಕ್​ನಲ್ಲಿ 2008ರ ಸೆಪ್ಟೆಂಬರ್​ 29 ರಂದು ನಡೆದ ಬಾಂಬ್​ ಸ್ಫೋಟದಲ್ಲಿ 6 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.
SCROLL FOR NEXT