ದೇಶ

ಭೀಮಾ ಕೋರೆಗಾವ್ ಹಿಂಸಾಚಾರ: ಪುಣೆ ಪೊಲೀಸರಿಂದ ಕ್ರಾಂತಿಕಾರಿ ಬರಹಗಾರ ವರವರ ರಾವ್ ಬಂಧನ

Nagaraja AB

ಹೈದ್ರಾಬಾದ್ :ಭೀಮಾ ಕೋರೆಗಾವ್  ಹಿಂಸಾಚಾರಕ್ಕೆ ಸಂಬಂಧಿಸಿದಂತೆ   ಕ್ರಾಂತಿಕಾರಿ ಬರಹಗಾರ ವರವರ ರಾವ್ ಅವರನ್ನು ಪುಣೆ ಪೊಲೀಸರು ಹೈದ್ರಾಬಾದಿನಲ್ಲಿಂದು ಬಂಧಿಸಿದ್ದಾರೆ.

ಭೀಮಾ ಕೋರೆಗಾವ್  ಹಿಂಸಾಚಾರಕ್ಕೆ ಸಂಬಂಧಿಸಿದಂತೆ  ತನಿಖೆ  ನಡೆಸುತ್ತಿರುವ ಪುಣೆ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಿಂದ ವರವರ ರಾವ್  ಹಾಗೂ ಅವರ ಪುತ್ರಿ, ಮತ್ತಿತರ ನಿವಾಸಿಗಳ ಮೇಲೆ  ಇಂದು ಬೆಳಗ್ಗೆ 6 ಗಂಟೆಯಿಂದಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ವರವರರಾವ್ ಅವರ ಪುತ್ರಿಯರಾದ ಅನಾಳ ಮತ್ತು ಪಾವನ ಅವರ ಮನೆಯ ಮೇಲೂ ದಾಳಿ  ನಡೆದಿದೆ.  ಕ್ರಾಂತಿ ತೆಲುಕ ಪತ್ರಿಕೆಯ ಛಾಯಾಗ್ರಾಹಕರೊಬ್ಬರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
SCROLL FOR NEXT