ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉತ್ತರ ಪ್ರದೇಶ: ಮಹಿಳಾವಾದಿ ಪತ್ನಿಯರಿಂದ ಬೇಸತ್ತ 150 ಪುರುಷರಿಂದ 'ಪಿಶಾಚಿನಿ ಮುಕ್ತಿ' ಪೂಜೆ, ಶ್ರಾದ್ಧ!

ಮಹಿಳಾ ಕೇಂದ್ರಿತ ಕಾನೂನು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾವಾದಿ ನಿಲುವುಗಳಿಂದ ಬೇಸತ್ತ 150 ಪುರುಷರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಿಶಾಚಿನಿ ಮುಕ್ತಿ ಪೂಜೆ ಹಾಗೂ ಶ್ರಾದ್ಧವನ್ನು ನಡೆಸಿದ್ದಾರೆ.

ಉತ್ತರ ಪ್ರದೇಶ: ಮಹಿಳಾವಾದಿ ಪತ್ನಿಯರಿಂದ ಬೇಸತ್ತ 150 ಪುರುಷರಿಂದ 'ಪಿಶಾಚಿನಿ ಮುಕ್ತಿ' ಪೂಜೆ, ಶ್ರಾದ್ಧ!
Srinivas Rao BV
Updated On : 28 Aug 2018, 4:29 am
ಉತ್ತರ ಪ್ರದೇಶ: ಮಹಿಳಾ ಕೇಂದ್ರಿತ ಕಾನೂನು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾವಾದಿ ನಿಲುವುಗಳಿಂದ ಬೇಸತ್ತ 150 ಪುರುಷರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪಿಶಾಚಿನಿ ಮುಕ್ತಿ ಪೂಜೆ ಹಾಗೂ ಶ್ರಾದ್ಧವನ್ನು ನಡೆಸಿದ್ದಾರೆ. 
ಮಹಿಳಾವಾದಿ ಪತ್ನಿಯರಿಂದ ಮುಕ್ತಿ ಪಡೆಯಲು ಸೇವ್ ಇಂಡಿಯನ್ ಫ್ಯಾಮಿಲಿ ಹಾಗೂ ದಾಮನ್ ಕ್ಷೇಮಾಭಿವೃದ್ಧಿ ಸಂಘ ಆ.15 ರಂದು ಈ ಧಾರ್ಮಿಕ ಕ್ರಿಯೆಗಳನ್ನು ಆಯೋಜಿಸಿತ್ತು. ಮಹಿಳಾವಾದಿ ಪತ್ನಿಯರಿಂದ ಬೇಸತ್ತ 150 ಪುರುಷರು ಪಿಶಾಚಿನಿ ಮುಕ್ತಿ ಪೂಜೆ, ಶ್ರಾದ್ಧಗಳನ್ನು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಮಹಿಳಾವಾದದಿಂದ ನಮ್ಮ ವೈವಾಹಿಕ ಜೀವನ ಮುರಿದುಬಿದ್ದಿದೆ ಆದ್ದರಿಂದ ಈ ರೀತಿ ಮಾಡಿದ್ದೆವೆ ಎಂದು ಹೇಳಿದ್ದಾರೆ. 
"ಮಹಿಳೆಯರಿಗಿಂತ ಪುರುಷರು ಶ್ರೇಷ್ಠ ಎಂದು ತೋರ್ಪಡಿಸುವುದಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ,  ನಾವು ಸಮಾನತೆ ಬಯಸುತ್ತೇವೆ, ಆದರೆ ಮಹಿಳಾವಾದದಿಂದ ಬೇಸತ್ತಿದ್ದೇವೆ ಎಂದು ಹೇಳಿದ್ದಾರೆ. 

Advertisement

Advertisement

ಸಾಮಾಜಿಕ ಕಾರ್ಯಕರ್ತ ಅಮಿತ್ ದೇಶಪಾಂಡೆ ಈ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದು, ಈ ದೇಶದ ಪುರುಷರು ಸಮಾನತೆ ಬಯಸುತ್ತಾರೆ. ಆದರೆ ತ್ಯಾಜ್ಯದಂತೆ ನಡೆಸಿಕೊಳ್ಳುವುದನ್ನು ಸಹಿಸುವುದಿಲ್ಲ. ಇಲ್ಲಿ ಬಂದಿರುವ 150 ಜನರು ಪುರುಷರ ಸಮಾನತೆಗಾಗಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments