ಕೊಚ್ಚಿಯಲ್ಲಿ ರಾಹುಲ್ ಗಾಂಧಿ 
ದೇಶ

ಕೇರಳಕ್ಕೆ ಕೇಂದ್ರ ಅಗತ್ಯ ಪರಿಹಾರ ಘೋಷಣೆ ಮಾಡದಿರುವುದಕ್ಕೆ ಬೇಸರವಿದೆ: ರಾಹುಲ್

ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡಬೇಕಿದ್ದು, ಇದು ಕೇರಳ ರಾಜ್ಯದ ಜನತೆಯ ದನಿಯಾಗಿದೆ. ಇದು ಅವರ ಹಕ್ಕೂ ಕೂಡ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿದ್ದಷ್ಟು ಪರಿಹಾರವನ್ನು ನೀಡದಿರುವುದಕ್ಕೆ...

ತಿರುವನಂತಪುರ: ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ನೀಡಬೇಕಿದ್ದು, ಇದು ಕೇರಳ ರಾಜ್ಯದ ಜನತೆಯ ದನಿಯಾಗಿದೆ. ಇದು ಅವರ ಹಕ್ಕೂ ಕೂಡ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿದ್ದಷ್ಟು ಪರಿಹಾರವನ್ನು ನೀಡದಿರುವುದಕ್ಕೆ ಬೇಸರವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ಹೇಳಿದ್ದಾರೆ. 

ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರಿಗೆ ಬೆಂಬಲ ನೀಡಲು ನಾನಿಲ್ಲಿಗೆ ಬಂದಿದ್ದೇನೆಯೇ ಹೊರತು ಪರಿಸ್ಥಿತಿಯನ್ನು ರಾಜಕೀಯ ಮಾಡುವುದಕ್ಕೆ ಅಲ್ಲ. ಪ್ರಕೃತಿ ವಿಕೋಪಕ್ಕೆ ಕಾರಣಗಳ ಕುರಿತು ನಾನು ಯಾವುದೇ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ಕೇರಳ ರಾಜ್ಯಕ್ಕೆ ಮತ್ತಷ್ಟು ಪರಿಹಾರ ನೀಡಬೇಕೆಂಬ ಆಗ್ರಹಕ್ಕೆ ನಾನು ಬೆಂಬಲ ನೀಡುತ್ತೇನೆ. ಈ ಕೂಗು ಕೇರಳ ಜನರದ್ದಾಗಿದ್ದೂ, ಇದು ಅವರ ಹಕ್ಕು ಕೂಡ ಆಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವಷ್ಟು ಪರಿಹಾರ ಬಿಡುಗಡೆ ಮಾಡದಿರುವುದಕ್ಕೆ ನನಗೂ ಬೇಸರವಿದೆ. 

ನಿರಾಶ್ರಿತರ ಹಲವು ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿದ್ದೆ. ಜನರ ಸಮಸ್ಯೆಗಳನ್ನು ಹಾಗೂ ಅವರ ನೋವುಗಳನ್ನು ಆಲಿಸಿದೆ. ಜನರ ಸಮಸ್ಯೆಗಳ ಕುರಿತು ಕೇರಳ ಮುಖ್ಯಮಂತ್ರಿಗಳ ಜೊತೆಗೂ ಮಾತುಕತೆ ನಡೆಸಿದ್ದೇನೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ಸಂಕಷ್ಟವನ್ನು ಸರ್ಕಾರ ಆಲಿಸುವುದು ಅತ್ಯಂತ ಮುಖ್ಯವಾಗಿದೆ. ಪರಿಹಾರಗಳು ಜನರಿಗೆ ಶೀಘ್ರಗತಿಯಲ್ಲಿ ತಲುಪಬೇಕು ಎಂದು ತಿಳಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)