ದೇಶ

ಯುಪಿಎ ಗಿಂತ ಶೇ. 20 ರಷ್ಟು ಕಡಿಮೆ ದರದಲ್ಲಿ ರಾಫೆಲ್ ವಿಮಾನ ಖರೀದಿ- ಅರುಣ್ ಜೇಟ್ಲಿ

Nagaraja AB

ನವದೆಹಲಿ:2007ರಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರಕ್ಕೆ ಹೋಲಿಸಿದ್ದರೆ, 2016ರಲ್ಲಿ  ಎನ್ ಡಿಎ ಸರ್ಕಾರ ಶೇ, 20 ರಷ್ಟು ಕಡಿಮೆ ದರದಲ್ಲಿ  ರಾಫೆಲ್ ಯುದ್ದ ವಿಮಾನ ಖರೀದಿಗೆ ಒಪ್ಪಂದ  ಮಾಡಿಕೊಂಡಿದೆ  ಎಂದು ವಿತ್ತ ಸಚಿವ ಅರುಣ್  ಜೇಟ್ಲಿ ಹೇಳಿದ್ದಾರೆ.

ಯಾವುದೇ  ಮಧ್ಯವರ್ತಿಗಳ ನೆರವಿಲ್ಲದೆ ಫ್ರಾನ್ಸ್ ಹಾಗೂ ಭಾರತ ಸರ್ಕಾರದ ನಡುವಿನ ಮಾತುಕತೆ ಮೂಲಕ  ಸಂಪೂರ್ಣ ತುಂಬಿರುವಂತಹ ವಿಮಾನಗಳನ್ನು  ಖರೀದಿ ಮಾಡಲಾಗುತ್ತಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ವಿಮಾನಗಳ ಬೆಲೆಗೂ , ಶಸ್ತ್ರಾಸ್ತ್ರಗಳನ್ನು ತುಂಬಿರುವ ಬೆಲೆಗಳಿಗೂ ವ್ಯತ್ಯಾಸವಿರುತ್ತದೆ.2012ರಲ್ಲಿಯೇ ಒಪ್ಪಂದ ಮಾಡಿಕೊಂಡಿದ್ದರೆ.2017ರಲ್ಲಿಯೇ ಆ ವಿಮಾನಗಳು ಬಿಡುಗಡೆ ಆಗುತ್ತಿದ್ದವು.2007ರಿಂದ 2017ರ ಅವಧಿಯಲ್ಲಿ ವಿದೇಶಿ ವಿನಿಮಯದಲ್ಲಿ ವ್ಯತ್ಯಾಸ ಕಾಣಸಿತ್ತು ಎಂದು ಅವರು ಹೇಳಿದ್ದಾರೆ.

2007ರಗಿಂತಲೂ 2016ರಲ್ಲಿ ವಿಮಾನಗಳ ಬೆಲೆಯಲ್ಲಿ  ಶೇ, 20 ರಷ್ಟು ಕಡಿಮೆಯಾಗಿತ್ತು  ಎಂದು ಹೇಳಿರುವ ಅವರು, ರಾಫೆಲ್ ವಿಮಾನ ಖರೀದಿ ಸಂಬಂಧದ ಮಾತುಕತೆಯ ವಿವರಗಳನ್ನು ಮಾಜಿ ರಕ್ಷಣಾ ಸಚಿವ ಎ. ಕೆ. ಅಂಟೋನಿ ಪೂರ್ಣವಾಗಿ ಓದಿ ತಮ್ಮ ಪಕ್ಷದವರಿಗೆ ತಿಳಿಸುವಂತೆ ಸಲಹೆ ನೀಡಿದ್ದಾರೆ.

ದುಬಾರಿ ವೆಚ್ಚದಲ್ಲಿ ರಾಫೆಲ್ ವಿಮಾನ ಖರೀದಿಸಲಾಗುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪವನ್ನು ಅಲ್ಲಗಳೆದ ಅರುಣ್ ಜೇಟ್ಲಿ,  ಕಾಂಗ್ರೆಸ್ ಪ್ರತಿಯೊಂದು ವಿಷಯದಲ್ಲಿ ತಪ್ಪು ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

SCROLL FOR NEXT