ದೇಶ

ಏಕಕಾಲಕ್ಕೆ ಲೋಕಸಭೆ, ಆಸೆಂಬ್ಲಿ ಚುನಾವಣೆ ಪ್ರಸ್ತಾವಕ್ಕೆ ಕಾನೂನು ಆಯೋಗ ಅನುಮೋದನೆ: ಸರ್ಕಾರಕ್ಕೆ ಕರಡು ವರದಿ

Nagaraja AB

ನವದೆಹಲಿ:ನಿರಂತರ ಚುನಾವಣಾ ಪ್ರಕ್ರಿಯೆ ತಡೆಗಟ್ಟಲು ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ನಡೆಸುವುದು ಪರಿಹಾರವಾಗಲಿದೆ ಎಂದು ಕರಡು ವರದಿಯಲ್ಲಿ ತಿಳಿಸಿರುವ  ಕಾನೂನು ಆಯೋಗ,  ಚುನಾವಣಾ ಕಾನೂನು ಪ್ರಕ್ರಿಯೆ ಹಾಗೂ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಶಿಫಾರಸ್ಸು ಮಾಡಿದೆ.

ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿರುವ ಆಯೋಗ ಕರಡು ವರದಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸಾರ್ವಜನಿಕರ ಹಣ ಉಳಿತಾಯವಾಗುತ್ತದೆ. ಭದ್ರತಾ  ಪಡೆ ಹಾಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಹೊರೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.  ಸರ್ಕಾರದ ನೀತಿಗಳನ್ನು ಉತ್ತಮವಾಗಿ ಅನುಷ್ಠಾನಗಳಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ದೇಶದಲ್ಲಿನ ಆಡಳಿತಾತ್ಮಕ ಯಂತ್ರ ಚುನಾವಣೆ ಬದಲಿಗೆ ನಿರಂತರವಾಗಿ ಅಭಿವೃದ್ದಿ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಸಂವಿಧಾನದ ಚೌಕಟ್ಟಿನೊಳಗೆ  ಏಕಕಾಲಿಕ ಚುನಾವಣೆ ನಡೆಸುವುದು ಕಷ್ಟಸಾಧ್ಯ ಎಂದು ಕಾನೂನು ಆಯೋಗ ತನ್ನ ಕರಡು ವರದಿಯಲ್ಲಿ ತಿಳಿಸಿದೆ.

SCROLL FOR NEXT