ದೇಶ

ರಾಷ್ಟ್ರವನ್ನು ಖಂಡಿಸುವುದು, ಟೀಕಿಸುವುದು ದೇಶ ವಿರೋಧಿಯಾಗುವುದಿಲ್ಲ: ಕಾನೂನು ಆಯೋಗ

Srinivas Rao BV
ರಾಷ್ಟ್ರವನ್ನು ಖಂಡಿಸುವುದು ದೇಶದ್ರೋಹವಲ್ಲ, ಸರ್ಕಾರದ ನೀತಿ ನಿಯಮಗಳನ್ನು ಒಪ್ಪದೇ ದೇಶದ ಬಹುಮತದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎಂದು ಕಾನೂನು ಆಯೋಗ ಹೇಳಿದೆ. 
ಅಕ್ರಮವಾಗಿ ಅಥವಾ ಹಿಂಸಾಚಾರದ ಮೂಲಕ ಯಾವುದೇ ಸರ್ಕಾರವನ್ನು ಉರುಳಿಸುವ ಕೃತ್ಯಗಳಿಗೆ ದೇಶದ್ರೋಹದ ಕಾನೂನನ್ನು ಅನ್ವಯ ಮಾಡಬಹುದಾಗಿದೆ ಎಂದು ಕಾನೂನು ಆಯೋಗ ಹೇಳಿದೆ. ಅಷ್ಟೇ ಅಲ್ಲದೇ ರಾಷ್ಟ್ರವಿರೋಧಿ ಕಾನೂನನ್ನು ಅನ್ವಯಿಸುವ ಐಪಿಸಿ ಸೆಕ್ಷನ್ 12 ಎ ನ್ನು ಮರುಪರಿಶೀಲನೆ ಮಾಡಬೇಕೆಂದು ಕಾನೂನು ಆಯೋಗ ಸಲಹೆ ನೀಡಿದೆ.
ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿರುವುದರಿಂದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಂತಹ ದೇಶದಲ್ಲಿ ದೇಶದ್ರೋಹ, ದೇಶವಿರೋಧಿ ಕಾನೂನಿನ ಪರಿಧಿಯನ್ನು ಮರುವ್ಯಾಖ್ಯಾನ ಮಾಡುವ ಅಗತ್ಯವಿದೆ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.   
SCROLL FOR NEXT