ದಾರುಣ ಘಟನೆ: ಪತ್ನಿ ಜತೆ ಜಗಳವಾಡಿ 3 ವರ್ಷದ ಮಗಳನ್ನು ರೇಪ್ ಮಾಡಿದ ಕಿರಾತಕ!
ಪತ್ನಿ ಜತೆ ಜಗಳವಾಡಿದ ನಂತರ ಮನೆಯಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಪಾಪಿ ತಂದೆ ತನ್ನ ಮೃಗತ್ವ ತೋರಿದ್ದಾನೆ.
ಪತ್ನಿ ಜತೆ ಜಗಳವಾಡಿದ ನಂತರ ಮನೆಯಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಪಾಪಿ ತಂದೆ ತನ್ನ ಮೃಗತ್ವ ತೋರಿದ್ದಾನೆ.
ಉತ್ತರಪ್ರದೇಶದ ಗುರುಗ್ರಾಮ್ ನಲ್ಲಿ ಈ ಘಟನೆ ನಡೆದಿದ್ದು ಕಳೆದ ಅಕ್ಟೋಬರ್ 28ರ ರಾತ್ರಿ ಪತ್ನಿ ಜತೆ ಗಂಡ ಜಗಳವಾಡಿದ್ದಾನೆ. ಈ ವೇಳೆ ಪತ್ನಿ ತನ್ನ ಮತ್ತೊಂದು ಪುಟ್ಟ ಮಗುವನ್ನು ಜತೆಯಲ್ಲೇ ಕರೆದುಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಮೂರು ವರ್ಷದ ಹೆಣ್ಣು ಮಗು ಮೇಲೆ ತನ್ನ ಮೃಗೀಯ ವರ್ತನೆ ತೋರಿದ್ದಾನೆ.
ಮರು ದಿನ ಬೆಳಗ್ಗೆ ಪತ್ನಿ ಮನೆಗೆ ಬಂದಾಗ ತನ್ನ ಮಗಳು ಪ್ರಜ್ಞೆ ಇಲ್ಲದೆ ಮಲಗಿದ್ದು ಹೊದಿಕೆಯೆಲ್ಲಾ ರಕ್ತಮಯವಾಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ಕೂಡಲೇ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.