ನರೇಂದ್ರ ಮೋದಿ-ಅಸಾದುದ್ದೀನ್ ಓವೈಸಿ
ಹೈದರಾಬಾದ್: ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಾ ಸೋಲಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾನೆ.
ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಅಸಾದುದ್ದೀನ್ ಓವೈಸಿ ಅವರು, ರಾಜ್ಯದಲ್ಲಿ ಎನ್ಡಿಎ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಅಲ್ಲಾ ಸೋಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲಾ ನಮ್ಮ ಜೊತೆಗಿದ್ದು ಅವರನ್ನೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತಾರೆ ಎಂದು ಚುನಾವಣಾ ಪ್ರಚಾರದಲ್ಲಿ ಓವೈಸಿ ಹೇಳಿದ್ದಾರೆ.
ನಿನ್ನೆ ವಿಕರಾಬಾದ್ ಜಿಲ್ಲೆಯ ತಂದೂರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಓವೈಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಕ್ಷಕ್ಕೆ ಸೇರಿದ ಅಭ್ಯರ್ಥಿಗಳು ನನ್ನ ತಲೆ ಕಡಿದು, ಕಾಲಿನ ಕೆಳಗೆ ಇಟ್ಟುಕೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದರು. ಇನ್ನು ಮನೆಯಲ್ಲಿ ನಿಮಗೆ ತೃಪ್ತಿ ಸಿಗುತ್ತಿಲ್ಲ ಎಂದರೆ, ವೈದ್ಯರ ಬಳಿ ಹೋಗಿ. ಇಲ್ಲವೇ ತಜ್ಞರ ಬಳಿ ಹೋಗಿ. ತೃಪ್ತಿ ಪಡೆಯಲು ಸಾಕಷ್ಟು ದಾರಿಗಳಿವೆ. ಎಲ್ಲವನ್ನೂ ನಾನು ವಿವರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.