ನವಜೋತ್ ಸಿಂಗ್ ಸಿಧು 
ದೇಶ

ಪಂಜಾಬ್ ರಾಜ್ಯದ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್; ಸಿಎಂ ಬಳಿ ಕ್ಷಮೆಯಾಚಿಸಿ- ಸಿಧುಗೆ ಕಾಂಗ್ರೆಸ್ ಸಂಸದ

ಪಂಜಾಬ್ ರಾಜ್ಯದ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್. ಅಸಂಬದ್ಧ ಹೇಳಿಕೆ ನೀಡಿದ್ದ ಸಚಿವ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಬಳಿ ಕೂಡಲೇ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಸಂಸದ ರವ್ನೀತ್...

ಲುಧಿಯಾನ: ಪಂಜಾಬ್ ರಾಜ್ಯದ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್. ಅಸಂಬದ್ಧ ಹೇಳಿಕೆ ನೀಡಿದ್ದ ಸಚಿವ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಬಳಿ ಕೂಡಲೇ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಬಿಟ್ಟು ಅವರು ಆಗ್ರಹಿಸಿದ್ದಾರೆ. 
ಲುಧಿಯಾನದಲ್ಲಿರುವ ಪ್ರತೀಯೊಂದು ಬೀದಿಯಲ್ಲಿರುವ ಪೋಸ್ಟರ್ ಗಳಲ್ಲಿ ಪಂಜಾಬ್ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್ ಎಂದು ರಾರಾಜಿಸುತ್ತಿವೆ. ಇದು ಜನರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ್ದು. ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಗಳನ್ನು ತಮ್ಮ ತಂದೆಯೆಂದು ಪರಿಗಣಿಸುವುದೇ ಆದರೆ, ತಮ್ಮ ಹೇಳಿಕೆ ಕುರಿತಂತೆ ಕೂಡಲೇ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ. 
ಮುಖ್ಯಮಂತ್ರಿಗಳ ವಿರೋಧವಿದ್ದರೂ ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಕಾರಣ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ನವಜೋತ್ ಸಿಧು ಅವರು, ಅಮರೀಂದರ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. 
ಹೈದರಾಬಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಧು, ನನ್ನ ಕ್ಯಾಪ್ಟನ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಅವರೇ ನನ್ನನ್ನು ಪಾಕಿಸ್ತಾನಕ್ಕೆ ತೆರಳಲು ಆದೇಶಿಸಿದ್ದರು. ರಾಹುಲ್ ಗಾಂಧಿಯವರು ಪಂಜಾಬ್ ಮುಖ್ಯಮಂತ್ರಿಗಳೂ ಕ್ಯಾಪ್ಟೆನ್ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ದೆಹಲಿ ಚಲೋ’ ಪ್ರತಿಭಟನೆಗೆ ಬ್ರೇಕ್: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ 1.10 ಲಕ್ಷ ಫಾರಂ-7 ಅರ್ಜಿ ಸ್ವೀಕೃತಿ, 40.88 ಲಕ್ಷ ನೋಟಿಸ್ ವಿಚಾರಣೆ ಪೂರ್ಣ: ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video