ದೇಶ

ನೌಕಾಪಡೆಯ ಬತ್ತಳಿಕೆ ಸೇರಲಿವೆ 56 ಸಮರನೌಕೆಗಳು, ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನ ವಾಹಕ

Srinivasamurthy VN
ನವದೆಹಲಿ: ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವಾಗಲಿದ್ದು, ಬರೊಬ್ಬರಿ 56 ಅತ್ಯಾಧುನಿಕ ಸಮರನೌಕೆಗಳು ಜಲಾಂತರ್ಗಾಮಿಗಳು ಮತ್ತು ಯುದ್ಧ ವಿಮಾನ ವಾಹಕವು ನೌಕಾಪಡೆಯ ಬತ್ತಳಿಕೆ ಸೇರಲಿವೆ ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದ್ದು, ಈಗಾಗಲೇ ಮೂರನೇ ಯುದ್ಧ ವಿಮಾನ ವಾಹಕ ನೌಕೆಯನ್ನು ಸೇವೆಗೆ ತರಲು ಸಜ್ಜುಗೊಳಿಸುವ ವೇಳೆಯಲ್ಲೇ, 56 ಸಮರ ನೌಕೆಗಳು ಹಾಗು ಜಲಾಂತರ್ಗಾಮಿಗಳನ್ನು ಸೇವೆಗೆ ತರಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಂಬಾ ತಿಳಿಸಿದ್ದಾರೆ.
ಮಂಗಳವಾರ ನೌಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಭಾರತೀಯ ನೌಕಾಪಡೆ ದೇಶದ ನೌಕಾ ಪ್ರದೇಶವನ್ನು ನೌಕಾಪಡೆ ಸದಾ ಕಣ್ಣಲ್ಲಿ ಕಣ್ಣಿಟ್ಟು ಪಹರೆ ಕಾಯುತ್ತಿದೆ. ಅಂತೆಯೇ ಕರಾವಳಿ ರಕ್ಷಣೆಯನ್ನು ಮತ್ತಷ್ಟು ಬಿಗಿ ಮಾಡುವ  ಉದ್ದೇಶದಿಂದ ಸುಮಾರು 2.5 ಲಕ್ಷ ಮೀನುಗಾರರ ದೋಣಿಗಳಿಗೆ ಟ್ರಾನ್ಸ್ ಪಾಂಡರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ತುರಂತವಾಗಿ ಸಾಗುತ್ತಿದೆ ಎಂದರು.
ಅಂತೆಯೇ ಮೂರನೇ ಯುದ್ಧ ವಿಮಾನ ವಾಹಕ ಸಮರ ನೌಕೆಯನ್ನು ಸೇವೆಗೆ ತರಲು ಕೆಲಗಳು ಶೀಘ್ರಗತಿಯಲ್ಲಿ ಸಾಗುತ್ತಿವೆ. ಇದರ ನಡುವೆಯೇ 56 ಹೊಸ ಸಮರ ನೌಕೆಗಳು ಹಾಗು ಜಲಾಂತರ್ಗಾಮಿಗಳಲ್ಲದೇ 32 ಹೊಸ ಸಮರನೌಕೆಗಳು ನಿರ್ಮಾಣದ ಹಂತದಲ್ಲಿವೆ.  ಸೀಶೆಲ್ಸ್ ನ ಅಸಂಪ್ಷನ್‌ ದ್ವೀಪದಲ್ಲಿ ನೌಕಾ ನೆಲೆ ಸ್ಥಾಪನೆ ಸಂಬಂಧ ಸರ್ಕಾರಗಳ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ಲಂಬಾ ತಿಳಿಸಿದ್ದಾರೆ.
SCROLL FOR NEXT