ದೇಶ

ಕಾಂಡೋಮ್ ಬಳಸಿದ್ದ ವಿದ್ಯಾರ್ಥಿಗೆ ಅವಮಾನ: ನೆಟಿಜನ್ ಗಳಿಂದ ವಿದ್ಯಾರ್ಥಿಗೆ ಬೆಂಬಲ, ಐಐಟಿ ವಿರುದ್ಧ ಟ್ರೋಲ್!

Srinivas Rao BV
ಚೆನ್ನೈ: ಕ್ಯಾಂಪಸ್ ನಲ್ಲಿದ್ದ ಹಾಸ್ಟೆಲ್ ರೂಮ್ ನಲ್ಲಿ ಕಾಂಡೋಮ್ ಬಳಕೆ ಮಾಡಿದ್ದ ವಿದ್ಯಾರ್ಥಿಗೆ ಅವಮಾನ ಮಾಡಿ, ದಂಡ ವಿಧಿಸಿದ್ದ ಐಐಟಿ ಮದ್ರಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 
ಹಾಸ್ಟೆಲ್ ರೂಮ್ ನಲ್ಲಿ ಕಾಂಡೋಮ್ ಬಳಕೆ ಮಾಡಿದ್ದ ವಿದ್ಯಾರ್ಥಿಗೆ 5,000 ರೂಪಾಯಿ ದಂಡ ವಿಧಿಸಿ, ವಿವರಗಳನ್ನು ಬಹಿರಂಗಪಡಿಸಿ ಅವಮಾನ ಮಾಡಿತ್ತು. ಈ ಬಗ್ಗೆ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿತ್ತು. ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟಿಜನ್ ಗಳು ವಿದ್ಯಾರ್ಥಿ ಪರವಾಗಿ ನಿಂತಿದ್ದು, ಐಐಟಿ ಮದ್ರಾಸ್ ತೀವ್ರವಾಗಿ ಟ್ರೋಲ್ ಗೊಳಗಾಗಿದೆ. 
ಹೋಟೆಲ್ ಮ್ಯಾನೇಜ್ಮೆಂಟ್ ಆಫಿಸ್ (ಒಹೆಚ್ಎಂ) ನ ನಿಯಮಗಳ ಪ್ರಕಾರ ಕಾಂಡೋಮ್ ಬಳಕೆಯನ್ನು ನಿಷೇಧಿಸಲಾಗಿಲ್ಲ. ಆದರೆ ಅನಧಿಕೃತವಾಗಿ ಕಾಂಡೋಮ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕಾಂಡೋಮ್ ಬಳಕೆ ಮಾಡಿದ ವಿದ್ಯಾರ್ಥಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಐಐಟಿಯನ್ನೇ ಟ್ರೋಲ್ ಮಾಡಲಾಗುತ್ತಿದೆ. ಇದೇ ವೇಳೆ ವಿದ್ಯಾರ್ಥಿಯ ವಿವರಗಳನ್ನು ಬಹಿರಂಗಪಡಿಸಿರುವುದನ್ನು ಐಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಆಡಳಿತ ಮಂಡಳಿಯ ನಿರಾಕರಣೆಗೆ ಸಾಕ್ಷ್ಯ ಸಮೇತವಾಗಿ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು ಕಳೆದ ವಾರ ವಿವರಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಸೋಮವಾರ ತೆಗೆಯಲಾಗಿದೆ. 
ತಜ್ಞರು ಸಹ ಕಾಂಡೋಮ್ ಬಳಕೆಯನ್ನು ಕಳಂಕ ಎಂಬಂತೆ ಬಿಂಬಿಸುವುದು ಕಡಿಮೆಯಾಗಬೇಕು, ಆರೋಗ್ಯಕರ ಸಮಾಜಕ್ಕಾಗಿ ಕಾಂಡೋಮ್ ಬಳಕೆ ಮಾಡಿದರೆ ಅದನ್ನು ಉತ್ತೇಜಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT