ದೇಶ

ವೇಗವಾಗಿ ಬೆಳೆಯುತ್ತಿರುವ ವಿಶ್ವದ ಟಾಪ್ 10 ನಗರಗಳು ಭಾರತದಲ್ಲೇ ಇವೆ, 3ನೇ ಸ್ಥಾನದಲ್ಲಿ ಬೆಂಗಳೂರು!

Lingaraj Badiger
ಬೆಂಗಳೂರು: ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಟಾಪ್ 10 ನಗರಗಳು ಭಾರತದಲ್ಲೇ ಇದ್ದು, ಮುಂದಿನ ಎರಡು ದಶಕಗಳಲ್ಲಿ ಭಾರತ ವಿಶ್ವದ ಪ್ರಭಾವಿ ದೇಶವಾಗಲಿದೆ ಎಂದು ಆಕ್ಸ್ಫರ್ಡ್ ಜಾಗತಿಕ ನಗರಗಳ ಸಂಶೋಧನೆ ತಿಳಿಸಿದೆ.
ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ವಿಶ್ವದ ಟಾಪ್ 10 ನಗರಗಳ ಪಟ್ಟಿಯಲ್ಲಿ ಭಾರತದ ಹತ್ತು ನಗರಗಳು ಸ್ಥಾನ ಪಡೆದಿವೆ. ಈ ಪೈಕಿ ತಮಿಳುನಾಡಿನ ಮೂರು(ತಿರುಪ್ಪುರ್, ತಿರುಚಿ ಮತ್ತು ಚೆನ್ನೈ) ನಗರಗಳು ಸ್ಥಾನ ಪಡೆದಿವೆ. 
ಇನ್ನು ಟಾಪ್ 10 ನಗರಗಳ ಪಟ್ಟಿಯಲ್ಲಿ ನಮ್ಮ ಉದ್ಯಾನನಗರಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಗುಜರಾತ್ ನ ಸೂರತ್ ಮೊದಲ ಹಾಗೂ ಆಗ್ರ ಎರಡನೇ ಸ್ಥಾನದಲ್ಲಿವೆ.
ವಜ್ರ ಸಂಸ್ಕರಣೆ ಹಾಗು ವ್ಯಾಪಾರ ಕೇಂದ್ರವಾದ ಸೂರತ್ ವಾರ್ಷಿಕ ಸರಾಸರಿ ಬೆಳವಣಿಗೆ ಶೇ. 9.17 ರಷ್ಟು ಹೊಂದಿದೆ. 
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟಾಪ್ 10 ನಗರಗಳ ಪಟ್ಟಿ
1. ಸೂರತ್
2. ಆಗ್ರ
3. ಬೆಂಗಳೂರು
4. ಹೈದರಾಬಾದ್
5. ನಾಗ್ಪುರ್
6. ತಿರುಪ್ಪುರ್
7. ರಾಜ್ ಕೋಟ್
8. ತಿರುಚಿ
9. ಚೆನ್ನೈ
10. ವಿಜಯವಾಡ
SCROLL FOR NEXT