ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನದಲ್ಲಿ 'ಕೈ'ಗೆ ಅಧಿಕಾರ; ಮಧ್ಯ ಪ್ರದೇಶ, ಛತ್ತೀಸ್ ಗಢದಲ್ಲಿ ಅತಂತ್ರ ಸಾಧ್ಯತೆ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ....
ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಶುಕ್ರವಾರ ಸಂಜೆ ಮುಕ್ತಾಯಗೊಂಡಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಮಧ್ಯೆ, ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿವೆ.
ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಹೇಳಲಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಪಕ್ಷ ತಿಣುಕಾಡಿ ಮುನ್ನಡೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಸ್ಥಾನ
ಟೈಮ್ಸ್ ನೌ- ಸಿಎನ್ ಎಕ್ಸ್ ಸಮೀಕ್ಷೆ ಪ್ರಕಾರ, ರಾಜಸ್ಥಾನದ ಒಟ್ಟು 200 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 85, ಕಾಂಗ್ರೆಸ್ 105, ಬಿಎಸ್‌ಪಿ 2, ಇತರೆ 1ಸ್ಥಾನ ಲಭಿಸಲಿದೆ. ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ 101 ಸ್ಥಾನಗಳ ಅಗತ್ಯವಿದೆ.
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 81-101, ಕಾಂಗ್ರೆಸ್ 81-103, ಬಿಎಸ್ ಪಿ 2, ಇತರೆ 7
ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಬಿಜೆಪಿ 55-72, ಕಾಂಗ್ರೆಸ್ 119-141, ಬಿಎಸ್ ಪಿ 0, ಇತರೆ 4
ಮಧ್ಯ ಪ್ರದೇಶ
ಮಧ್ಯ ಪ್ರದೇಶದ 230 ಸ್ಥಾನಗಳ ಪೈಕಿ ಬಿಜೆಪಿ 126, ಕಾಂಗ್ರೆಸ್+ 89, ಬಿಎಸ್‌ಪಿ 6, ಇತರರು 9 ಸ್ಥಾನ ಗಳಿಸಲಿದ್ದಾರೆ ಎಂದು ಟೈಮ್ಸ್ ನೌ ತಿಳಿಸಿದೆ.
ಸಿವೋಟರ್ ಸಮೀಕ್ಷೆ ಪ್ರಕಾರ, ಬಿಜೆಪಿ 90-106, ಕಾಂಗ್ರೆಸ್ 110-126, ಬಿಎಸ್ ಪಿ 3, ಇತರೆ 4
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 108-128, ಕಾಂಗ್ರೆಸ್ 95-115, ಬಿಎಸ್ ಪಿ 2, ಇತರೆ 7
ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಬಿಜೆಪಿ 102-120 ಕಾಂಗ್ರೆಸ್ 104-122, ಬಿಎಸ್ ಪಿ 1-3, ಇತರೆ 1-8
ಛತ್ತೀಸ್ ಗಢ ಚುನಾವಣೋತ್ತರ ಸಮೀಕ್ಷೆ
ಸಿವೋಟರ್: ಬಿಜೆಪಿ 35-43, ಕಾಂಗ್ರೆಸ್ 40-50, ಬಿಎಸ್ ಪಿ 3-7, ಇತರೆ 3-4
ಟೈಮ್ಸ್ ನೌ: ಬಿಜೆಪಿ 46, ಕಾಂಗ್ರೆಸ್ 35, ಬಿಎಸ್ ಪಿ 7, ಇತರೆ 2
ಜನ್ ಕೀ ಬಾತ್: ಬಿಜೆಪಿ 40-48, ಕಾಂಗ್ರೆಸ್ 37-43, ಬಿಎಸ್ ಪಿ 5-6, ಇತರೆ 0-7
ಇಂಡಿಯಾ ಟುಡೇ: ಬಿಜೆಪಿ 21-31 ಕಾಂಗ್ರೆಸ್ 55-65, ಬಿಎಸ್ ಪಿ 4-8, ಇತರೆ 0
ಮಿಜೋರಾಂ ಚುನಾವಣೋತ್ತರ ಸಮೀಕ್ಷೆ
ಸಿವೋಟರ್: ಎಂಎನ್ ಎಫ್ 16-20, ಬಿಜೆಪಿ 0, ಕಾಂಗ್ರೆಸ್ 14-18, ಇತರೆ 0-4