ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ
ರಾಜಸ್ಥಾನ: ತಮ್ಮ ಫಿಟ್ನೆಸ್ ಕುರಿತು ಹೇಳಿಕೆ ನೀಡಿದ್ದ ಜೆಡಿಯು ಮಾಜಿ ನಾಯಕ ಶರದ್ ಯಾವದ್ ಅವರ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇಯವರು ತೀವ್ರವಾಗಿ ಕಿರಿಕಾರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪ್ರಚಾರವೊಂದರಲ್ಲಿ ಮಾತನಾಡಿದ್ದ ಯಾದವ್ ಅವರು, ವಸುಂದರಾ ರಾಜೇ ಅವರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಅವರಿಗೆ ಅವರ ಆರೋಗ್ಯ ಹಾಗೂ ದೇಹದ ಸೌಂದರ್ಯದ ಕುರಿತು ಕಾಳಜಿ ವಹಿಸಲು ಸಮಯವೇ ಇಲ್ಲದಂತಾಗಿದೆ. ಆ ಕಾರಣಕ್ಕಾದರೂ ನೀವು ಈ ಬಾರಿ ಬಿಜೆಪಿಗೆ ವಿಶ್ರಾಂತಿ ನೀಡಬೇಕು. ಸಿಎಂ ವಸುಂದರಾ ರಾಜೇ ಬಹಳ ಸುಸ್ತಾಗಿದ್ದಾರ. ಅವರಿಗೆ ರಾಜಕೀಯದಿಂದ ಸ್ವಲ್ಪ ಬಿಡುವು ನೀಡೋಣ. ಮೊದಲೆಲ್ಲಾ ಸಣಣಗಿದ್ದರು. ಈಗ ತಮ್ಮ ಬಗ್ಗೆ ಕಾಳಜಿ ವಹಿಸಲು ಬಿಡುವಿಲ್ಲದೆ. ಯಾವ ರೀತಿ ದಪ್ಪಾಗಾಗಿದ್ದಾರೆ ನೋಡಿ. ಆಕೆ ನಮ್ಮ ಮಧ್ಯಪ್ರದೇಶದ ಮಗಳು, ಆಕೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯೂ ಹೌದು ಎಂದು ಗೇಲಿ ಮಾಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಸುಂದರಾ ರಾಜೇಯವರು, ಯಾದವ್ ಅವರ ಹೇಳಿಕೆಯಿಂದ ನನಗೆ ಅವಮಾನವಾದಂತಾಗಿದೆ. ಮಹಿಳೆಯರಿಗೂ ಅವಮಾನ ಮಾಡಿದಂತಾಗಿದೆ. ಯಾವುದೇ ನಾಯಕರ ವಿರುದ್ಧ ನಾವು ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ಇದು ನಾಗರೀಕ ವರ್ತನೆಯಲ್ಲ. ಇಂತಹ ಭಾಷೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡು ಮುಂದೆಂದೂ ಈ ರೀತಿ ಆಗದಂತೆ, ಇದೊಂದು ಉದಾಹರಣೆಯಾಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ.