ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಶಾಲೇಲಿ ಜಾಸ್ತಿ ಮಾತನಾಡುತ್ತಾರೆಂದು ಮಕ್ಕಳ ಬಾಯಿಗೆ ಟೇಪ್ ಸುತ್ತಿದ್ದ ಶಿಕ್ಷಕಿ ಅಮಾನತು

ಶಾಲೆಯಲ್ಲಿ ಅತಿಯಾಗಿ ಮಾತನಾಡುತ್ತವೆಂದು ಇಬ್ಬರು ಎಲ್ ಕೆಜಿ ಮಕ್ಕಳ ಬಾಯಿಗೆ ಸೆಲ್ಲೋಟೇಪ್ ಸುತ್ತಿ ಬಾಯಿ ಮುಚ್ಚಿಸಿದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಶನಿವಾರ ಅಮಾನತು.....

ಸಂಗ್ರಹ ಚಿತ್ರ
Raghavendra Adiga
Updated On : 8 Dec 2018, 4:59 am
ಗುರುಗ್ರಾಮ: ಶಾಲೆಯಲ್ಲಿ ಅತಿಯಾಗಿ ಮಾತನಾಡುತ್ತವೆಂದು ಇಬ್ಬರು ಎಲ್ ಕೆಜಿ ಮಕ್ಕಳ ಬಾಯಿಗೆ ಸೆಲ್ಲೋಟೇಪ್ ಸುತ್ತಿ ಬಾಯಿ ಮುಚ್ಚಿಸಿದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಶನಿವಾರ ಅಮಾನತು ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ವೀಡಿಯೋ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.
ಸುಮಾರು ನಾಲ್ಕರಿಂದ ಐದು ವರ್ಷದ ಇಬ್ಬರು ಮಕ್ಕಳ ಬಾಯಿಗೆ ಸೆಲ್ಲೋಟೇಪ್ ಸುತ್ತಿ ಮಾತನಾಡದಂತೆ ನಿರ್ಬಂಧಿಸಿದ್ದ ಶಿಕ್ಷಕಿಯ ವರ್ತನೆಯನ್ನು ಜನರು ಖಂಡಿಸಿದ್ದಾರೆ.

Advertisement

Advertisement

ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಈ ಸಂಬಂಧ ಇಬ್ಬರೂ ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿದೆ..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement