ದೇಶ

ಟಿವಿ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷ-ಬಿಜೆಪಿ ನಾಯಕರ ನಡುವೆ ಘರ್ಷಣೆ: ಪೊಲೀಸರಿಂದ ಬಂಧನ

Srinivas Rao BV
ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ನಾಯಕರು ಸುದ್ದಿ ವಾಹಿನಿಯಲ್ಲಿ ನಡೆದ ಲೈವ್ ಚರ್ಚೆಯಲ್ಲಿ ಅಕ್ಷರಸಹ ಕೈ ಕೈ ಮಿಲಾಯಿಸಿದ್ದಾರೆ. 
ನೋಯ್ಡಾ ಸೆಕ್ಟರ್ 16-ಎ ವಿಚಾರಕ್ಕೆ ಸಂಬಂಧಪಟ್ಟ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷ-ಬಿಜೆಪಿ ನಾಯಕರು ಕೈಕೈ ಮಿಲಾಯಿಸಿದ್ದು, ಬಿಜೆಪಿ ವಕ್ತಾರ ಪೊಲೀಸರಿಗೆ ದೂರು ನೀಡಿದ ಬಳಿಕ ಸಮಾಜವಾದಿ ಪಕ್ಷದ ನಾಯಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಸಮಾಜವಾದಿ ಪಕ್ಷದ ನಾಯಕ ಭದೋರಿಯಾ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಕ್ರಮದ ವಿಡಿಯೋ ಕ್ಲಿಪ್ಪಿಂಗ್ ಕಳಿಸುವಂತೆ ಸುದ್ದಿ ವಾಹಿನಿ ಸಂಸ್ಥೆಗೆ ಸೂಚನೆ ನೀಡಲಾಗಿದೆ. 
SCROLL FOR NEXT