ದೇಶ

ಪಾಕ್ ಆಕ್ರಮಿತ ಕಾಶ್ಮೀರದ ಸಚಿವರ ಉಪಸ್ಥಿತಿ: ಸಾರ್ಕ್ ಸಭೆಯಿಂದಲೇ ಹೊರನಡೆದ ಭಾರತೀಯ ಅಧಿಕಾರಿ!

Srinivas Rao BV
ಇಸ್ಲಾಮಾಬಾದ್: ಸಾರ್ಕ್ ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಸಚಿವರು ಇದ್ದ ಕಾರಣ ಅಸಮಾಧಾನ ವ್ಯಕ್ತಪಡಿಸಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿ ಸಭೆಯಿಂದಲೇ ಹೊರನಡೆದಿದ್ದಾರೆ. 
ರಾಯಭಾರಿ ಅಧಿಕಾರಿ ಶುಭಂ ಸಿಂಗ್, ಸಭೆಯಿಂದ ಹೊರನಡೆದಿರುವ ಅಧಿಕಾರಿಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಸಚಿವ ಚೌಧರಿ ಮೊಹಮ್ಮದ್ ಸಯೀದ್ ಸಾರ್ಕ್ ಸಭೆಯಲ್ಲಿ ಭಾಗವಹಿಸಿದ್ದನ್ನು  ಪ್ರತಿಭಟಿಸಿದ್ದಾರೆ.
ಭಾರತ ಸಂಪೂರ್ಣ ಕಾಶ್ಮೀರವನ್ನು ತನ್ನ ಅವಿಭಾಜ್ಯ ಅಂಗವೆಂದು ಹೇಳುತ್ತಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಸಚಿವರನ್ನು ಮಾನ್ಯ ಮಾಡುವುದಿಲ್ಲ. 2016 ರಲ್ಲಿ ಉರಿ ಸೆಕ್ಟರ್ ನಲ್ಲಿ ನಡೆದ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ನಡೆಯನೇಕಿದ್ದ ಸಾರ್ಕ್ ಸಮ್ಮೇಳನವನ್ನು ಭಾರತ ಬಹಿಷ್ಕರಿಸಿತ್ತು. ಭಾರತಕ್ಕೆ ಬೆಂಬಲ ಸೂಚಿಸಿ ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ ದೇಶಗಳೂ ಸಹ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಸಭೆಯನ್ನು ಬಹಿಷ್ಕರಿಸಿದ್ದವು. 
SCROLL FOR NEXT