ಹೈದ್ರಾಬಾದ್ : ತೆಲಂಗಾಣದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕೆ . ಚಂದ್ರಶೇಖರ್ ರಾವ್ ಅವರ ತೆಲಂಗಣ ರಾಷ್ಟ್ರೀಯ ಸಮಿತಿ- ಟಿಆರ್ ಎಸ್ ಸರ್ಕಾರ ರಚಿಸಲಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭರವಸೆ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆಯವರೆಗೂ ಕಾಯಬೇಕಾಗಿದೆ. ಎಲ್ಲಾ ಊಹೆಗಳು ನಿರಾಧಾರ ಎಂಬುದು ಗೊತ್ತಾಗಲಿದೆ. ಟಿಆರ್ ಎಸ್ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿವೆ.
119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಟಿಆರ್ ಎಸ್ 66 , ಕಾಂಗ್ರೆಸ್ 37, ಬಿಜೆಪಿ 7 , ಇತರೆ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಟೈಮ್ಸ್ ನೌ- ಸಿಎನ್ ಎಕ್ಸ್ ಅಂದಾಜಿಸಿವೆ.
ರಿಪಬ್ಲಿಕ್ ಟಿವಿ- ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಟಿಆರ್ ಎಸ್ 50 ರಿಂದ 65, ಕಾಂಗ್ರೆಸ್ 38 ರಿಂದ 52, ಬಿಜೆಪಿ 4-7 ಮತ್ತು ಇತರೆ ಪಕ್ಷಗಳು 8-14 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ . ಬಹುಮತಕ್ಕೆ 60 ಸ್ಥಾನಗಳನ್ನು ಹೊಂದಬೇಕಾಗಿದೆ.
ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆದಿತ್ತು, ನಾಳೆ ಮತಎಣಿಕೆ ನಡೆಯಲಿದೆ.