ನವದೆಹಲಿ: ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಹಾಗೂ ಖ್ಯಾತ ಅಂಕಣಕಾರ ಸುರ್ಜಿತ್ ಭಲ್ಲಾ ಅವರು ರಾಜೀನಾಮೆ ನೀಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ರಾಜೀನಾಮೆ ಕುರಿತಂತೆ ಸ್ವತಃ ಸುರ್ಜಿತ್ ಭಲ್ಲಾ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಡಿಸೆಂಬರ್ 1 ರಂದು ರಾಜೀನಾಮೆ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ನೀತಿ ಆಯೋಗದ ಸದಸ್ಯ ಬಿಬೇಕ್ ದೆಬ್ರಾಯ್ ಅವರ ನೇತೃತ್ವದ ಆರ್ಥಿಕ ಸಲಹಾ ಮಂಡಳಿಯಲ್ಲಿ ಪ್ರಸ್ತುತ ಆರ್ಥಿಕ ತಜ್ಞರಾದ ರಥಿನ್ ರಾಯ್, ಅಶಿಮಾ ಗೋಯಲ್ ಹಾಗೂ ಶಮಿಕಾ ರವಿ ಸದಸ್ಯರಾಗಿದ್ದಾರೆ.