ಜಯ್ ನಾರಾಯಣ್ ವ್ಯಾಸ 
ದೇಶ

ಆರ್ ಬಿಐ ನೂತನ ಗವರ್ನರ್ ಸಾಮರ್ಥ್ಯ ಪ್ರಶ್ನಿಸಿದ ಬಿಜೆಪಿ ನಾಯಕ!

ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿರುವ ಶಶಿಕಾಂತ್ ದಾಸ್ ಅವರ ಸಾಮರ್ಥ್ಯವನ್ನು ಬಿಜೆಪಿ ನಾಯಕ ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.

ಅಹ್ಮದಾಬಾದ್ : ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ನೇಮಕವಾಗಿರುವ ಶಶಿಕಾಂತ್ ದಾಸ್ ಅವರ ಸಾಮರ್ಥ್ಯವನ್ನು  ಬಿಜೆಪಿ ನಾಯಕ ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.

ಐಎಎಸ್ ಅಧಿಕಾರಿ ಬಗ್ಗೆಗೌರವವಿದೆ. ಆದರೆ , ಅವರು ಕೆಲವೊಂದು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿರಬಹುದು ಆದರೆ,  ಈ ಹಿಂದೆ ಇದ್ದ ಗವರ್ನರ್ ನಂತೆ  ಶಕ್ತಿಕಾಂತ್ ದಾಸ್ ಅವರನ್ನು ಅಂತಾರಾಷ್ಟ್ರೀಯ ಸಮುದಾಯ ಒಪ್ಪಿಕೊಳ್ಳಲಿದೆಯೇ , ಇಲ್ಲ ಎಂದು ಅವರು ಹೇಳಿದ್ದಾರೆ.

ಆರ್ ಬಿಐ ನಿರ್ವಹಣೆ ಮಾಡಬೇಕಾದರೆ  ದೇಶಿಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆ ಬಗ್ಗೆ ಮುಕ್ತ ಜ್ಞಾನವಿರಬೇಕಾಗುತ್ತದೆ ಎಂದು  ಜಯ್ ನಾರಾಯಣ್ ಹೇಳಿದ್ದಾರೆ.

ಉರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡದ ಬಳಿಕ ಮಾಜಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಹಾಗೂ 15 ನೇ ಹಣಕಾಸು ಆಯೋಗದ ಸದಸ್ಯ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರಬ್ಯಾಂಕಿನ ಗವರ್ನರ್ ಆಗಿ ಸರ್ಕಾರ ನಿಯೋಜಿಸಿದೆ.

ಇತಿಹಾಸದಲ್ಲಿ ಮಾಸ್ಟರ್ ಡಿಗ್ರಿ ಹೊಂದಿರುವ  ಶಕ್ತಿಕಾಂತ್ ದಾಸ್  ನಿವೃತ್ತಿ ಸಂದರ್ಭದಲ್ಲಿ ದೊಡ್ಡ ಹುದ್ದೆ ದೊರಕಿದೆ. ಅಂತಹವರು ಆರ್ ಬಿಐಗೆ ಮಾರ್ಗದರ್ಶಕರಾಗಿ ಮೀಸಲು ಅಂತಹ ವಿವಾದಗಳಿಗೆ ಉತ್ತರಿಸಬಲ್ಲರೇ  ಎಂದು ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT