ಜೈಪುರ: ರಾಜಸ್ತಾನದಲ್ಲಿ ಮ್ಯಾಜಿಕ್ ನಂಬರ್ ಮಿಸ್ ಮಾಡಿಕೊಂಡಿರುವ ಕಾಂಗ್ರೆಸ್ ಬುಧವಾರ ರಾಹುಲ್ ಗಾಂಧಿ ಅವರ ಜೊತೆ ಆರು ಪಕ್ಷೇತರರ ಜೊತೆ ಸಭೆ ನಡೆಸಿದ್ದಾರೆ.
ರಾಜಸ್ತಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಜೈಪುರ ನಿವಾಸದಲ್ಲಿ ಸಭೆ ನಡೆಸಲಾಗಿತ್ತು. ಇಂದು ಸಂಜೆ ಒಳಗೆ ಅಧಿಕೃತವಾಗಿ ಪ್ರಕಟಿಸಲಾಗುವುದು, ಪ್ರತಿ ಶಾಸಕರ ಜೊತೆಗೆ ನಮಗೆ ಉತ್ತಮ ಬಾಂಧವ್ಯವಿದೆ, ಹಿಗಾಗಿ ಪ್ರತಿಯೊಬ್ಬರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೈಕಮಾಂಡ್ ನಿರ್ದೇಶನದಂತೆ ಮುಂದಿನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 199 ಕ್ಷೇತ್ರಗಳಲ್ಲಿ ಕಾಂಗ್ರೆಸ್ 99 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ, ಬಿಜೆಪಿ 73 ಸ್ಥಾನ ಗಳಿಸಿದೆ. ಹೀಗಾಗಿ ಪಕ್ಷೇತರರ ಬೆಂಬಲ ಪಡೆದು ಸ್ವತಂತ್ರ್ಯವಾಗಿ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ.