ಹೈದರಾಬಾದ್: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹಲವು ನಾಯಕರಿಗೆ ಆಘಾತ ನೀಡಿದ್ದು, ತೆಲಂಗಾಣದಲ್ಲಿ ಸೋಲಿನ ಆಘಾತದಿಂದ ಇಬ್ಬರು ಪ್ರಬಲ ರಾಜಕೀಯ ನಾಯಕರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಚುನಾವಣೆಯಲ್ಲಿ ಸೋತ ಆಘಾತದಿಂದ ದಿಢೀರ್ ಕುಸಿದು ಬಿದ್ದ ನಲಗೊಂಡಾ ಕಾಂಗ್ರೆಸ್ ಅಭ್ಯರ್ಥಿ ಕೋಮಟಿ ರೆಡ್ಡಿ ವೆಂಕಟ ರೆಡ್ಡಿ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ ಪಾಲೈರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಂಡಲಾ ಉಪೇಂದ್ರ ರೆಡ್ಡಿ ಅವರ ವಿರುದ್ಧ ಸೋಲು ಅನುಭವಿಸಿದ ಟಿಆರ್ ಎಸ್ ಅಭ್ಯರ್ಥಿ ತುಮ್ಮಲಾ ನಾಗೇಶ್ವರ್ ರಾವ್ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ವೆಂಕಟ ರೆಡ್ಡಿ ರಕ್ತದೊತ್ತಡ ಹೆಚ್ಚಾಗಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿಯಮಿತ ತಪಾಸಣೆಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಟಿಆರ್ ಎಸ್ ಅಭ್ಯರ್ಥಿ ಕಂಚಾರ್ಲಾ ಭೂಪಾಲ್ ರೆಡ್ಡಿ ಎದುರು ವೆಂಕಟ ರೆಡ್ಡಿ ಅವರು 8,633 ಮತಗಳ ಅಂತರದಿಂದ ಸೋತಿದ್ದರು.