ದೇಶ

ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿಯ ವಿವರಗಳನ್ನು ಪಡೆಯಲು ಪಿಎಸಿಗೆ ಖರ್ಗೆ ಒತ್ತಾಯ

Raghavendra Adiga
ನವದೆಹಲಿ: ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿ ಸಂಸತ್ತಿನಲ್ಲಿ ಎಂದು ಮಂಡನೆಯಾಗಿದೆ ಎಂದು ಟಾರ್ನಿ ಜನರಲ್ ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಕೇಳಬೇಕು ಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ  ಮಲ್ಲಿಕಾರ್ಜುನ ಖರ್ಗೆಹೇಳಿದರು.
ರಾಫೆಲ್ ಡೀಲ್ ಕುರಿತು ತನಿಖೆಗೆ ನಿರಾಕರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ದಿನದ ಬಳಿಕ  ಶನಿವಾರ ಲೋಕಸಭೆಯಲ್ಲಿ ಸಾರ್ವಜನಿಕ ಲೆಕ್ಕ ಪರಿಶೋಧಕರ ವರದಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಖರ್ಗೆ ಈ ಮಾತು ಕೇಳಿದ್ದಾರೆ.
ರಾಫೆಲ್ ಒಪ್ಪಂದದ ಕುರಿತ ಸಿಎಜಿ ವರದಿ ಸಂಬಂಧ ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿದ ಖರ್ಗೆ ಸರ್ಕಾರ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾವು ಸುಪ್ರೀಂ ಕೋರ್ಟ್ ಅನ್ನು ಗೌರವಿಸುವುದಾಗಿ ಹೇಳಿದ ಖರ್ಗೆ "ಇದು ತನಿಖಾ ಸಂಸ್ಥೆಯಿಂದ ತನಿಖೆ ಮಾಡಬೇಕಾದ ವಿಚಾರವಲ್ಲ. ಬದಲಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಾಫೆಲ್ ಒಪ್ಪಂದದ ಕುರಿತು ತನಿಖೆ ನಡೆಸಬಹುದು ಎಂದಿದ್ದಾರೆ.
ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಎಂದು ಮಂಡಿಸಲಾಗಿದೆ ಎಂದು ಅಟಾರ್ನಿ ಜನರಲ್ (ಎಜಿ) ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಕೇಳಲು  ಪಿಎಸಿ ಸದಸ್ಯರನ್ನು ನಾನು  ಒತ್ತಾಯಿಸುತ್ತೇನೆ ಎಂದು ಖರ್ಗೆ ಸುದ್ದಿಗಾರರಿಗೆ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದಂತೆ ರಾಫೆಲ್ ಕುರಿತ ಸಿಎಜಿ ವರದಿ ಸಂಸತ್ತಿನಲ್ಲಿ ಮಂಡನೆಯಾಗಿ ಪಿಎಸಿ ಯಲ್ಲಿ ಚರ್ಚಿಸಲಾಗಿದೆ ಎಂಬ ಸುಪ್ರೀಂ ಹೇಳಿಕೆಯನ್ನು ಖರ್ಗೆ ಉಲ್ಲೇಖಿಸಿದ್ದರು.
ಸಿಎಜಿ ವರದಿಯನ್ನು ಪಿಎಸಿ ಚರ್ಚಿಸಿದೆ ಎನ್ನುವುದು ತಪ್ಪು ಮಾಹಿತಿ, ಕೋರ್ಟ್ ಗೆ ಸರ್ಕಾರ ಈ ರೀತಿಯಾಗಿ ತಪ್ಪು ಮಾಹಿತಿ ನೀಡಿರುವುದು ಆಘಾತಕಾರಿ ವಿಷಯವಾಗಿದೆ.ಹೀಗಾಗಿ ಸಿಎಜಿ ವರದಿ ಕುರಿಇತು ತಾನು ತಪ್ಪು ಮಾಹಿತಿ ನೀಡಿರುವ ಸರ್ಕಾರ ತಕ್ಷಣ ಕ್ಷಮೆ ಕೋರಬೇಕು  ಎಂದು ಅವರು ಆಗ್ರಹಿಸಿದರು.
SCROLL FOR NEXT