ಭೋಪಾಲ್: ನೆಚ್ಚಿನ ಗಂಡನೊಂದಿಗೆ ಸುಖ ಸಂಸಾರ ನಡೆಸಲೆಂದು ಗಂಡನ ಮನೆಗೆ ಬಂದಿದ್ದ ನವ ವಿವಾಹಿತೆಗೆ ಗಂಡನ ಲಜ್ಜೆಗೇಡಿ ತನ ಹಾಗೂ ಮಾವನಿಂದ ಅತ್ಯಾಚಾರದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
20 ವರ್ಷದ ನರಸಿಂಗಾಪುರದ ನವ ವಿವಾಹಿತೆ ಬಜಾರಿಯಾ ಮೂಲದ ಯುವಕನೊಂದಿಗೆ ಈ ವರ್ಷದ ಜೂನ್ ತಿಂಗಳಲ್ಲಿ ವಿವಾಹವಾಗಿದ್ದಳು. ಗಂಡನ ಮನೆಗೆ ಬಂದಾಗಿನಿಂದ ಆಕೆಯ ಮಾನ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಒಂದು ದಿನ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ ಅತ್ಯಾಚಾರವನ್ನು ಎಸಗಿದ್ದಾನೆ, ನಡೆದ ಸಂಗತಿಯನ್ನು ಗಂಡನಿಗೆ ತಿಳಿಸಿದರೆ ಗಂಡ ಸ್ವಲ್ಪ ಅಡ್ಜೇಸ್ಟ್ ಮಾಡ್ಕೋ ಎಂದು ಹೇಳಿದ್ದು ಇದರಿಂದ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನವ ವಿವಾಹಿತೆ ನಡೆದ ವಿಷಯವನ್ನೆಲ್ಲಾ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇದನ್ನು ಕಂಡ ಪತಿ ಆಕೆಯ ಮೊಬೈಲ್ ಅನ್ನು ಒಡೆದು ಹಾಕಿ ಆಕೆಗೆ ಹಿಂಸೆ ನೀಡಲು ಆರಂಭಿಸಿದ್ದ. ಮೊದಲೇ ನೊಂದಿದ್ದ ಆಕೆ ಇದರಿಂದ ಮತ್ತಷ್ಟು ರೋಸಿ ಹೋಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾಳೆ.
ಮೃತಳ ಪೋಷಕರು ನೀಡಿದ ದೂರಿನನ್ವಯ ನರಸಿಂಗಾಪುರದ ಪೊಲೀಸರು ಪತಿ, ಮಾವ ಹಾಗೂ ಅತ್ತೆಯನ್ನು ಬಂಧಿಸಿದ್ದಾರೆ.