ರಾಜಕೀಯದಲ್ಲಿ ಪ್ರಾಮುಖ್ಯ ಪಡೆಯಲು ಜನ ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆ: ಯೋಗಿ
ಚುನಾವಣೆ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ನೀಡುವ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದು, ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕಾಗಿ ಜನ ತಮ್ಮ ಗೋತ್ರ, ಜನಿವಾರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಫೈಜಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಹಿಂದೊಮ್ಮೆ ಯಾರು ತಮ್ಮನ್ನು ತಾವು ಆಕಸ್ಮಿಕ ಹಿಂದೂಗಳೆಂದು ಹೇಳಿಕೊಂಡಿದ್ದರೋ ಅವರೇ ಈಗ ನಿಜವಾಗಿಯೂ ಹಿಂದೂಗಳಾಗುತ್ತಿದ್ದಾರೆ. ಇದು ಸನಾತನ ನಂಬಿಕೆಯ ಗೆಲುವು ಎಂದು ಆದಿತ್ಯನಾಥ್ ಹೇಳಿದ್ದಾರೆ.
ರಾಮಾಯಣದ ಎದುರು ಗೂಗಲ್ ವಿಫಲವಾಗಿದೆ. ಸರ್ಚ್ ಇಂಜಿನ್ ಹೇಳುವುದಕ್ಕಿಂತ ಧಾರ್ಮಿಕ ಗ್ರಂಥಗಳಲ್ಲಿನ ಜ್ಞಾನ ದೊಡ್ಡದಿದೆ. ತಾವು ಆಕಸ್ಮಿಕ ಹಿಂದೂಗಳೆಂದು ಹೇಳಿಕೊಂಡಿದ್ದವರು ಈಗ ರಾಜಕೀಯದಲ್ಲಿ ಪ್ರಾಮುಖ್ಯತೆ ಪಡೆಯಲು ಜನ ಗೋತ್ರ, ಜನಿವಾರ ತೋರಿಸಲು ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭ ಮೇಳದಲ್ಲಿ ಎಲ್ಲಾ ಜಾತಿಯವರೂ ಪಾಲ್ಗೊಳ್ಳುತ್ತಾರೆ ಇದು ಧಾರ್ಮಿಕ ಭವ್ಯತೆಯ ಸಂಕೇತ. ವೇದಗಳಲ್ಲಿನ ಹಲವು ಭಾಗಗಳನ್ನು ದಲಿತ ಋಷಿಗಳೇ ರಚಿಸಿದ್ದರು, ವಾಲ್ಮೀಕಿ ರಾಮನನ್ನು ಸಂದರ್ಶಿಸಿದ ಸಂತ, ಅದರೆ ಈ ಸಮುದಾಯದವರು ತಾರತಮ್ಯ ಎದುರಿಸಿದ್ದರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.