ಎಸ್ ಡಿಎಂಗೆ ಬಿಜೆಪಿ ಶಾಸಕನ ಆವಾಜ್
ಆಗ್ರಾ: ನಿಮಗೆ ನಾನು ಶಾಸಕ ಎಂದು ಗೊತ್ತಿಲ್ವಾ, ರಾಜಕಾರಣಿಯಾಗಿ ನನ್ನ ಪವರ್ ಏನು ಎಂಬುದು ಗೊತ್ತಿಲ್ವಾ? ನೀವು ಕೇವಲ ಓರ್ವ ಎಸ್‌ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಎಂಬುದನ್ನು ನಾನು ನಿಮಗೆ ತೋರಿಸಿಕೊಡಬೇಕಾ ? ನೀವು ಒಬ್ಬ ಸರಕಾರಿ ಸೇವಕ ಎನ್ನುವುದು ಕೂಡ ನಿಮಗೆ ಗೊತ್ತಿಲ್ವಾ ಎಂದು ಬಿಜೆಪಿ ಶಾಸಕರೊಬ್ಬರು ಆವಾಜ್ ಹಾಕಿದ್ದಾರೆ.
ಫತೇಪುರ ಸಿಕ್ರಿಯ ಬಿಜೆಪಿ ಶಾಸಕ ಉದಯಭಾನ್ ಚೌಧರಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗರೀಮಾ ಸಿಂಗ್ ಎಂಬ ಕರ್ತವ್ಯನಿಷ್ಠ ಮಹಿಳಾ ಅಧಿಕಾರಿಯ ವಿರುದ್ಧ ಗುಡುಗಿದ್ದು ರಾಜಕಾರಣಿಯ ದರ್ಪ ತೋರಿದ್ದಾರೆ.
ರೈತರ ಸಮಸ್ಯೆಯನ್ನು ಕೇಳಲು ಕ್ಷೇತ್ರಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಉದಯಭಾನು ಚೌಧರಿ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ,
ನೆರೆದಿದ್ದ ಜನರ ನಡುವಿನಿಂದ 'ಎಸ್‌ಡಿಎಂ ಜಿಂದಾಬಾದ್' ಎಂಬ ಘೋಷಣೆ ಕೇಳಿ ಬಂತು. ಇದರಿಂದ ಕೊಂಚ ವಿಚಲಿತರಾದವರಂತೆ ಕಂಡು ಬಂದ ಶಾಸಕ ಚೌಧರಿ ಅನಂತರ ಅಲ್ಲಿಂದ ಸದ್ದಿಲ್ಲದೆ ನಿರ್ಗಮಿಸಿದ್ದಾರೆ.