ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜಿಎಸ್‏ಟಿ ಸಭೆ: 34 ವಸ್ತುಗಳನ್ನು ಬಿಟ್ಟು, ಮಿಕ್ಕೆಲ್ಲವೂ 18% ತೆರಿಗೆ ವ್ಯಾಪ್ತಿಗೆ; ಎಲೆಕ್ಟ್ರಾನಿಕ್ಸ್, ಸಿನಿಮಾ ಟಿಕೆಟ್ ಬೆಲೆ ಇಳಿಕೆ

ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ. 18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ , ಸಿನಿಮಾ ಟಿಕೆಟ್ ಬೆಲೆ ಕೂಡಾ ಇಳಿಕೆಯಾಗಲಿದೆ.

ಸಂಗ್ರಹ ಚಿತ್ರ
Nagaraja AB
Updated On : 24 Dec 2018, 11:58 am

ನವದೆಹಲಿ:  ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ- ಜಿಎಸ್ ಟಿ ಸಭೆಯಲ್ಲಿ  34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ. 18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್ , ಸಿನಿಮಾ ಟಿಕೆಟ್ ಬೆಲೆ  ಇಳಿಕೆಯಾಗಲಿದೆ.

ಸಭೆಯಲ್ಲಿ  ಕೈಗೊಂಡಿರುವ ನಿರ್ಧಾರಗಳನ್ನು  ಸುದ್ದಿಗಾರರಿಗೆ ತಿಳಿಸಿದ ಅರುಣ್ ಜೇಟ್ಲಿ,  ಈಗ 34 ಐಷರಾಮಿ ವಸ್ತುಗಳಿಗೆ ಮಾತ್ರ ಶೇ. 28 ತೆರಿಗೆ ವಿಧಿಸಲಾಗುವುದು, ಎಕಾನಾಮಿ ದರ್ಜಿಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್ ಟಿಯನ್ನು ಶೇ. 5 ಹಾಗೂ ಬ್ಯೂಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ, 12 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

100ರೂ. ವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 18 ರಿಂದ  ಶೇ.12ಕ್ಕೆ ಇಳಿಕೆ ಮಾಡಲಾಗಿದೆ. 100 ರೂ. ಮೇಲ್ಪಟ್ಟ  ಸಿನಿಮಾ ಟಿಕೆಟ್ ಮೇಲೆ  ಶೇ. 18 ರಷ್ಟು ತೆರಿಗೆ ವಿಧಿಸಲಾಗುವುದು ಎಂದರು.

ಮಾನಿಟರ್ ,  ಟಿವಿ,  ಪವರ್ ಬ್ಯಾಂಕ್  ಮತ್ತಿತರ ವಸ್ತುಗಳ ಮೇಲಿನ ಜಿಎಸ್ ಟಿ ತೆರಿಗೆಯನ್ನು ಶೇ. 28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ದಿವ್ಯಾಂಗರು ಬಳಸುವ ವಸ್ತುಗಳ ಮೇಲೆ ಶೇ, 5ರಷ್ಟು ಇಳಿಸಲಾಗಿದ್ದು, ಜನ್ ಧನ್ ಬ್ಯಾಂಕ್  ಖಾತೆಗಳಿಗೆ ಸೇವೆ ಒದಗಿಸುವ ಬ್ಯಾಂಕುಗಳಿಗೆ  ಜಿಎಸ್ ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಜನವರಿ 1. 2019ರಿಂದ ಪರಿಷ್ಕೃತ ಜಿಎಸ್ ಟಿ ದರಗಳು ಜಾರಿಗೆ ಬರಲಿದ್ದು, ಇಂದು ಮಾಡಿರುವ ಜಿಎಸ್ ಟಿ ದರ ಪರಿಷ್ಕರಣೆಯಿಂದಾಗಿ ಸುಮಾರು 5500 ಕೋಟಿ ರೂ. ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement