ದೇಶ

ಪಾಕ್'ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳ: ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವಾಲಯ

Manjula VN
ನವದೆಹಲಿ: ಪಾಕಿಸ್ತಾನದಲ್ಲಿ ನೆಲೆಸಿರುವ ಹಲವು ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ನೆರೆ ರಾಷ್ಟ್ರ ಭಾರೀ ಕಿರುಕುಳ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ. 
ಪಾಕಿಸ್ತಾನದಲ್ಲಿರುವ ನೆಲೆಸಿರುವ ರಾಯಭಾರಿ ಅಧಿಕಾರಿಗಳ ನಿವಾಸಗಳಿಗೆ ಹೊಸ ಗ್ಯಾಸ್ ಕನೆಕ್ಷನ್ ನೀಡಲು ನಿರಾಕರಿಸುವುದು, ಅಧಿಕಾರಿಘಳನ್ನು ಭೇಟಿಯಾಗಲು ಬರುವ ಅತಿಥಿಗಳಿಗೆ ಕಿರುಕುಳ ನೀಡುವುದು, ಹಿರಿಯ ಅಧಿಕಾರಿಗಳ ಇಂಟರ್ನೆಟ್ ಸಂಪರ್ಕಗಳನ್ನು ತಡೆಯುವುದು ಹೀಗೆ ನಾನಾ ರೀತಿಯಲ್ಲಿ ಪಾಕಿಸ್ತಾನ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಪಾಕಿಸ್ತಾನದಿಂದ ಭಾರತೀಯ ರಾಯಭಾರಿ ಅಧಿಕಾರಿಗಳಿಗೆ ಕಿರುಕುಳವಾಗುತ್ತಿರುವುದು ಇದು ಮೊದಲನೇನಲ್ಲ. ಈ ಹಿಂದೆ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೂ ಇಂತಹದ್ದೇ ಸಾಕಷ್ಟು ದೂರುಗಳು ಬಂದಿದ್ದವು. ಈ ನಡುವೆ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳೂ ಕೂಡ ಆರೋಪ ಮಾಡಿದ್ದು, ತಮಗೂ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ವಿಚಾರ ಕುರಿತು ಪಾಕಿಸ್ತಾನದ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ರೀತಿಯ ಸಮಸ್ಯೆಗಳನ್ನು ನೀಡದಂತೆ ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ. 
SCROLL FOR NEXT