ದೇಶ

ಭಯೋತ್ಪಾದನೆ ನಿಗ್ರಹ, ಅಪರಾಧ ನಿಯಂತ್ರಣದಲ್ಲಿ ಪೊಲೀಸರ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ

Nagaraja AB

ಕೆವಡಿಯಾ: ಭಯೋತ್ಪಾದನೆ ನಿಗ್ರಹ ಹಾಗೂ ಅಪರಾಧ ನಿಯಂತ್ರಣದಲ್ಲಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಗುಜರಾತಿನ ಕೆವಡಿಯಾದಲ್ಲಿ ಇಂದು  ನಡೆದ ಪೊಲೀಸ್ ಮಹಾನಿರ್ದೇಶಕರುಗಳು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನ ನಿಗ್ರಹದಲ್ಲಿ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ದೇಶಾದ್ಯಂತ ಸಮುದಾಯದ ಮಧ್ಯೆ  ದ್ವೇಷದ ಭಾವನೆ ಮೂಡಿಸಲು ಯತ್ನಿಸುವವರ ವಿರುದ್ಧ ಜಾಗೃತಿ ವಹಿಸುವಂತೆ ಪೊಲೀಸರಿಗೆ ಪ್ರಧಾನಿ ಕರೆ ನೀಡಿದರು.  ಅಪರಾಧ ತಡೆಗಟ್ಟಲು ಅಂತರ್ ರಾಜ್ಯ ಸಮನ್ವಯತೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು.
ದೇಶದ ಏಕತೆ, ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸಬೇಕು, ತಳಮಟ್ಟದಿಂದ ಪೊಲೀಸ್ ಇಲಾಖೆಯನ್ನು ಸದೃಢಗೊಳಿಸುವಂತೆ  ಪ್ರಧಾನಿ ಹೇಳಿದರು
SCROLL FOR NEXT