ದೇಶ

1984 ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ದೋಷಿ: ಸಜ್ಜನ್ ಕುಮಾರ್ ಸುಪ್ರೀಂಗೆ ಮೇಲ್ಮನವಿ ಅರ್ಜಿ

Nagaraja AB

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ  ಜೀವಾವಧಿ ಶಿಕ್ಷೆಗೊಳಗಾಗಿರುವ ಮಾಜಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್   ಸುಪ್ರೀಂಕೋರ್ಟ್ ನಲ್ಲಿ ಇಂದು  ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ದೆಹಲಿ ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಆದರೆ, ಹಕ್ಕು ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಕಾಲ ಎಂದು ಈ ಹಿಂದೆ ಸಜ್ಜನ್ ಕುಮಾರ್ ಪರ ವಕೀಲ ಅನಿಲ್ ಶರ್ಮಾ ಹೇಳಿದ್ದರು.

ಹಿಂಸಾಚಾರ ಪ್ರಕರಣದಲ್ಲಿ  ಸಂತ್ರಸ್ತರ ಪರ ವಕಲತ್ತು ವಹಿಸುತ್ತಿರುವ ಹಿರಿಯ ವಕೀಲ ಹೆಚ್. ಎಸ್ ಪೊಲ್ಕಾ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಜ್ಜನ್ ಕುಮಾರ್  ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ವಿಭಾಗೀಯ ಕೋರ್ಟಿನ ರಿಜಿಸ್ಟ್ರೀ ಜೊತೆಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಸಜ್ಜನ್ ಕುಮಾರ್ ಪರವಾಗಿ ವಿಚಾರಣೆ ನಡೆಸದಂತೆ ಹಿಂಸಾಚಾರ ಪ್ರಕರಣದ ಸಂತ್ರಸ್ತರು ಈಗಾಗಲೇ ಸುಪ್ರೀಂಕೋರ್ಟ್ ಗೆ ಕೆವಿಯಟ್ ಅರ್ಜಿ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

 ರಾಜ್ ನಗರದಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 17 ರಂದು  ಸಜ್ಜನ್ ಕುಮಾರ್ ಆರೋಪಿ ಎಂದು ಘೋಷಿಸಿದ್ದ ದೆಹಲಿ ನ್ಯಾಯಾಲಯ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಶಿಕ್ಷೆಗಾಗಿ  ಶರಣಾಗುವ ಅವಧಿಯನ್ನು ಜನವರಿ 30ರವರೆಗೂ ವಿಸ್ತರಿಸುವಂತೆ ಸಜ್ಜನ್ ಕುಮಾರ್  ಸಲ್ಲಿಸಿದ್ದ ಅರ್ಜಿಯನ್ನು  ಶುಕ್ರವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.

SCROLL FOR NEXT