ನವದೆಹಲಿ: ಭಾರತ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮಾಡಿರುವ ಟ್ವೀಟ್ ಒಂದು ಸಾಮಾಜಿಕ ತಾಣ ಬಳಕೆದಾರರ ತಲೆ ಕೆಡುವಂತೆ ಮಾಡಿದೆ. ಸಚಿವೆ ಸುಷ್ಮಾ ಸ್ವರಾಜ್ ರಹಸ್ಯ ಸಂಖ್ಯೆಯೊಂದನ್ನು ಟ್ವೀಟ್ ಮಾಡಿದ್ದು ಇದು "ಒನ್ ಟೈಮ್ ಪಾಸ್ ವರ್ಡ್ ಆಗಿದೆಯೆ? ಯಾವುದೇ ದೇಶದ ಕೋಡ್ ಸಂಖ್ಯೆಯೆ ಅಥವಾ ತಪ್ಪಾಗಿ ಮಾಡಿದ ಟ್ವಿಟ್ ಆಗಿದೆಯೆ ಎಂದು ನೆಟ್ಟಿಗರು ತಲೆ ಕೆರೆದುಕೊಳ್ಳುತ್ತಿದ್ದಾರೆ.
ಶನಿವಾರ ಮಧ್ಯಾಹ್ನ ಸುಷ್ಮಾ ಸವಾರಾಜ್ ಈ ಟ್ವೀಟ್ ಂಆಡಿದ್ದು ಟ್ವೀಟ್‍ನಲ್ಲಿ ಕೇವಲ 638781 ಎಂಬ ಸಂಖ್ಯೆಯನ್ನು ಬರೆದುಕೊಂಡಿದ್ದಾರೆ.ಆದರೆ ಕೆಲವೇ ಸಮಯದ ಬಳಿಕ ಸಚಿವೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಇದೀಗ ಸಾಮಾಜಿಕ ತಾಣ ಬಳಕೆದಾರರು ಸಚಿವರ ಟ್ವಿಟ್ನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು ಈ ನಿಗೂಢ ಸಂಖ್ಯೆಯ ಹಿಂದಿನ ರಹಸ್ಯ ಬೇಧಿಸಲು ತೊಡಗಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಈ ಟ್ವೀಟ್ ಗೆ ಅವರ 12 ಮಿಲಿಯನ್ ಬೆಂಬಲಿಗರು (ಫಾಲೋವರ್ಸ್) ಹಾಗೂ ಟ್ವಿಟ್ಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಟ್ವಿಟ್ಟರ್ ನಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲರಾಗಿರುವ ಸಚಿವರಾಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣ ಮೂಲಕ ಜನರೊಡನೆ ನೇರ ಸಂಪರ್ಕದಲ್ಲಿರುವ ಇವರು ಹಲವು ಬಾರಿ ಜನರ ಸಮಸ್ಯೆಯನ್ನೂ ಸಹ ಬಗಹರಿಸಿದ್ದಾರೆ.ಕೇಂದ್ರ ಸಚಿವೆ ಸುಷ್ಮಾ 2010 ರಲ್ಲಿ ಟ್ವಿಟ್ಟರ್ ಗೆ ಸೇರ್ಪಡೆಗೊಂಡಿದ್ದರು.