ರಾಜೀವ್ ಗಾಂಧಿ ಭಾರತ ರತ್ನ ವಾಪಸ್ ಗೆ ನಿರ್ಣಯ: ರಾಜೀನಾಮೆ ನೀಡುತ್ತೇನೆ- ಆಪ್ ಶಾಸಕಿ ಅಲ್ಕಾ ಲಾಂಬ
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ನಿರ್ಣಯಕ್ಕೆ ಬೆಂಬಲಿಸದ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
1984 ರ ಸಿಖ್ ವಿರೋಧಿ ವಿರೋಧಿ ದಂಗೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡಿದ್ದ ದೆಹಲಿ ವಿಧಾನಸಭೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಆಪ್ ಶಾಸಕಿ ಅಲ್ಕಾ ಲಾಂಬ ಈ ನಿರ್ಣಯವನ್ನು ಬೆಂಬಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್, ಅಲ್ಕಾ ಲಾಂಬ ರಾಜೀನಾಮೆಗೆ ಆಗ್ರಹಿಸಿದ್ದರು.
ನಿರ್ಣಯವನ್ನು ಬೆಂಬಲಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ನಿರ್ಯಣಯವನ್ನು ನಾನು ಬೆಂಬಲಿಸಲಿಲ್ಲ ಎಂದು ಅಲ್ಕಾ ಲಾಂಬ ಹೇಳಿದ್ದಾರೆ. ನನ್ನ ನಿರ್ಧಾರಿಂದ ಉಂಟಾಗುವ ಪರಿಣಾಮಗಳನ್ನು ನಾನು ಎದುರಿಸುತ್ತೇನೆ, ಈ ಬಗ್ಗೆ ಸಿಎಂ ಕೇಜ್ರಿವಾಲ್ ಅವರೊಂದಿಗೆ ಮಾತನಾಡಿದ್ದೇನೆ. ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ ಎಂದು ಅಲ್ಕಾ ಲಾಂಬ ಹೇಳಿದ್ದಾರೆ.