ದೇಶ

ದೇವಸ್ಥಾನದ ಅಧಿಕಾರಿಯ ವಿರುದ್ಧ ಮಾಟ-ಮಂತ್ರ: ಶ್ರೀಶೈಲಂ ಅರ್ಚಕ ಅಮಾನತು

Lingaraj Badiger
ವಿಜಯವಾಡ: ದೇವಸ್ಥಾನದ ಅಧಿಕಾರಿಗಳ ವಿರುದ್ಧ ಮಾಟ-ಮಂತ್ರ ಮಾಡಿಸಿದ ಆರೋಪದ ಮೇಲೆ ಆಂಧ್ರ ಪ್ರದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾದ ಶ್ರೀಶೈಲಂ ನ ಶ್ರೀ ಬ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹಿರಿಯ ಅರ್ಚಕರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.
ಕರ್ನೂಲ್ ಜಿಲ್ಲೆಯ ನಲ್ಲಮಲ್ಲ ಅರಣ್ಯದಲ್ಲಿರುವ ಈ ಶಿವ ದೇವಸ್ಥಾನ ಜ್ಯೋತಿರ್ಲಿಂಗ ದೇವಸ್ಥಾನಗಳಲ್ಲಿ ಒಂದಾಗಿದ್ದು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ ರಾಮಚಂದ್ರ ಮೂರ್ತಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ದೇವಸ್ಥಾನದ ಹಿರಿಯ ಅರ್ಚಕ ಗಂಟಿ ರಾಧಾಕೃಷ್ಣ ಅವರು ಸೋಮವಾರ ರಾತ್ರಿ ದೇವಸ್ಥಾನ ನಗರಿಯ ಎಸ್ಆರ್ ಸಿ 31 ಕ್ವಾಟರ್ಸ್ ನಲ್ಲಿ ಮಾಟ-ಮಂತ್ರ ಮಾಡಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಮಾಟ-ಮಂತ್ರ ನಡೆಸಿದ್ದನ್ನು ಗಮನಿಸಿ ಇಂದು ಅರ್ಚಕರ ಅಮಾನತಿಗೆ ಆದೇಶಿಸಲಾಗಿದೆ.
SCROLL FOR NEXT