ದೇಶ

ಮುಂದಿನ 2 ವರ್ಷದಲ್ಲಿ 100 ಬಿಲಿಯನ್ ಡಾಲರ್ ಎಫ್ ಡಿಐಗೆ ಭಾರತದ ನಿರೀಕ್ಷೆ: ಸುರೇಶ್ ಪ್ರಭು

Nagaraja AB

ನವದೆಹಲಿ:  ಮುಂದಿನ  ಎರಡು ವರ್ಷದಲ್ಲಿ  100 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ  ಸ್ವೀಕಾರ ಹಾಗೂ  ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳ ಕಂಪನಿಗಳು ಹೂಡಿಕೆ ಮಾಡಿ ಕಾರ್ಯಾರಂಭಿಸಲು ವಿಶೇಷ ಕೈಗಾರಿಕಾ ಕ್ಲಸ್ಟರ್ ಸೃಷ್ಟಿಸುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡುವಂತಹ ದೇಶಗಳು ಹಾಗೂ ವಲಯಗಳನ್ನು  ವಾಣಿಜ್ಯ ಮತ್ತು ಉಧ್ಯಮ ಸಚಿವಾಲಯದಿಂದ ಗುರುತಿಸಲಾಗುವುದು ಎಂದು  ವಾಣಿಜ್ಯ ಮತ್ತು ಉದ್ಯಮ  ಖಾತೆ ಸಚಿವರು ಆಗಿರುವ ಸುರೇಶ್ ಪ್ರಭು ತಿಳಿಸಿದ್ದಾರೆ.

ವಿವಿಧ ವಲಯಗಳಿಂದ 100 ಬಿಲಿಯನ್ ಎಫ್ ಡಿಎ ಭಾರತಕ್ಕೆ ಹರಿದುಬರಬೇಕೆಂಬ ಗುರಿ ಹೊಂದಲಾಗಿದೆ. ಆದರೆ, ಇದು ಒಂದು ವರ್ಷದಲ್ಲಿ ಸಾಧ್ಯವಾಗದ ಮಾತು. ಅಂತಹ ಕಂಪನಿಗಳು, ವಲಯಗಳು ಮತ್ತು ದೇಶಗಳನ್ನು ಗುರುತಿಸಲಾಗುತ್ತಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ರೋಡ್ ಶೋ ನಡೆಸಲಾಗುವುದು ಎಂದು  ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮುಂದಿನ ವರ್ಷ ಸಾಗರೋತ್ತರ ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಕ್ಲಸ್ಟರ್ ಗಳನ್ನು ಸೃಷ್ಟಿಸಲಾಗುವುದು, ಭಾರತದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಚೀನಾ ಒಪ್ಪಿಕೊಂಡಿದ್ದು,  ಭಾರತದಲ್ಲಿ  ಕಾರ್ಖಾನೆ ಸ್ಥಾಪಿಸಲು ಉತ್ಸುಕವಾಗಿರುವ  ಆದೇಶಗಳ  ಕಂಪನಿಗಳ ಪಟ್ಟಿಯನ್ನು  ನೀಡಿದೆ. ಇದೇ ರೀತಿಯಲ್ಲಿ ಯುರೋಪ್ ಮತ್ತು ಅಮೆರಿಕಾ ಮತ್ತಿತರ ರಾಷ್ಟ್ರಗಳ ಕಂಪನಿಗಳನ್ನೂ  ಸ್ವಾಗತಿಸಲಾಗುವುದು. ಭಾರತದಲ್ಲಿ ಅವುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು  ಎಂದು ಅವರು  ತಿಳಿಸಿದ್ದಾರೆ

SCROLL FOR NEXT