ಅರುಣ್ ಜೇಟ್ಲಿ- ಕುಮಾರಸ್ವಾಮಿ ಭೇಟಿ: ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆ ಕೋರಿದ ಸಿಎಂ 
ದೇಶ

ಅರುಣ್ ಜೇಟ್ಲಿ ಭೇಟಿ ಮಾಡಿದ ಕುಮಾರಸ್ವಾಮಿ: ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆ ಕೋರಿದ ಸಿಎಂ

ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.27 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ನೀಡಲಾಗುತ್ತಿರುವ ಜಿಎಸ್ ಟಿ ಪರಿಹಾರ ಅವಧಿಯನ್ನು 2025 ವರೆಗೆ

ನವದೆಹಲಿ: ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.27 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದು, ರಾಜ್ಯಕ್ಕೆ ನೀಡಲಾಗುತ್ತಿರುವ ಜಿಎಸ್ ಟಿ ಪರಿಹಾರ ಅವಧಿಯನ್ನು 2025 ವರೆಗೆ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. 
ಜಿಎಸ್ ಟಿ ಜಾರಿಯ ನಂತರ ರಾಜ್ಯದ ಆದಾಯ ಕೊರತೆ ಶೇ.20 ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ಜಿಎಸ್ ಟಿ ಪರಿಹಾರ ಅವಧಿಯನ್ನು 2025 ವರೆಗೆ ವಿಸ್ತರಿಸಬೇಕೆಂದು ಅರುಣ್ ಜೇಟ್ಲಿಗೆ ಸಿಎಂ ಮನವಿ ಮಾಡಿದ್ದಾರೆ. 
ಪ್ರಸ್ತುತ ಜಿಎಸ್ ಟಿ ಜಾರಿಯಾದ 5 ವರ್ಷಗಳ ವರೆಗೆ ರಾಜ್ಯಗಳಿಗೆ ಪರಿಹಾರ ನೀಡಲಾಗುತ್ತಿದ್ದು 2022 ವರೆಗೆ ಪರಿಹಾರ ಸಿಗಲಿದೆ. ರಾಜ್ಯಕ್ಕೆ ಜಿಎಸ್ ಟಿಯಿಂದ ಉಂಟಾಗಿರುವ ನಷ್ಟ 2022 ರ ನಂತರವೂ ಮುಂದುವರೆಯಲಿದ್ದು, ಹಲವು ಯೋಜನೆಗಳ ಜಾರಿಗೆ ಅಡ್ಡಿಯಾಗಲಿದೆ ಎಂದು ಜೇಟ್ಲಿ ಬಳಿ ಕುಮಾರಸ್ವಾಮಿ ವಿವರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!