ಅಸ್ಸಾಂ: ಬೋಗಿಬೀಲ್ ಬ್ರಿಡ್ಜ್ ಮೇಲೆ ಅಪಘಾತದಲ್ಲಿ ಬಾಲಕ ಸಾವು, ವಿಡಿಯೋ ವೈರಲ್!
ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ದಿನಗಳ ಹಿಂದೆ ಅಸ್ಸಾನ ಬೋಗಿಬೀಲ್ ಬ್ರಿಡ್ಜ್ ಅನ್ನು ಉದ್ಘಾಟಿಸಿದ್ದು ಇದರ ಬೆನ್ನಲ್ಲೇ ಬ್ರಿಡ್ಜ್ ಮೇಲೆ ಸಂಭವಿಸಿದ ಮೊದಲ ಅಪಘಾತದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ದಿನಗಳ ಹಿಂದೆ ಅಸ್ಸಾಂನ ಬೋಗಿಬೀಲ್ ಬ್ರಿಡ್ಜ್ ಅನ್ನು ಉದ್ಘಾಟಿಸಿದ್ದು ಇದರ ಬೆನ್ನಲ್ಲೇ ಬ್ರಿಡ್ಜ್ ಮೇಲೆ ಸಂಭವಿಸಿದ ಮೊದಲ ಅಪಘಾತದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಹೊಸದಾಗಿ ಉದ್ಘಾಟನೆಗೊಂಡಿದ್ದರಿಂದ ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ತುಂಬಾ ಜನ ನಿಂತಿದ್ದರು. ಈ ವೇಳೆ ಟಾಟಾ ಸುಮ ವಾಹನದಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಸೇತುವೆ ಮೇಲಿನ ತನ್ನ ಮೊದಲ ಪ್ರಯಾಣವನ್ನು ಮೊಬೈಲ್ ನಲ್ಲಿ ಶೂಟ್ ಮಾಡುತ್ತಿದ್ದರು.
ಈ ವೇಳೆ ನಿಂತಿದ್ದ ಕಾರಿನ ಮುಂಭಾಗದಿಂದ ಬಾಲಕನೊಬ್ಬ ರಸ್ತೆಯ ಬಲಬದಿಗೆ ಓಡಿ ಬಂದಿದ್ದಾನೆ. ಕಾರು ಅಡ್ಡ ಇದ್ದಿದ್ದರಿಂದ ಚಾಲನಿಗೆ ಬಾಲಕ ದಿಢೀರ್ ಅಂತ ಬಂದಿದ್ದು ಕಾಣಿಸಲಿಲ್ಲ. ಪರಿಣಾಮ ಬಾಲಕನಿಗೆ ಕಾರು ಗುದ್ದಿದ್ದು ಆತ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.